×
Ad

ಐಪಿಸಿಸಿ ಪರೀಕ್ಷೆ: ಆಯಿಶಾ ಕಿಲ್ಲೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Update: 2017-08-29 22:41 IST

ಮಂಗಳೂರು, ಆ. 29: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಎಂ. ಆಯಿಶಾ ಕಿಲ್ಲೂರು ಸಿಎಸಿಪಿಟಿ ಬಳುಕ 2017ರ ಮೇಯಲ್ಲಿ ದೇಶಾದ್ಯಂತ ನಡೆದ ಐಪಿಸಿಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಕಳೆದ ವರ್ಷ ಸಿಪಿಟಿ ಪರೀಕ್ಷೆಯಲ್ಲಿ ದೇಶಕ್ಕೆ 21 ರ್ಯಾಂಕ್ ಪಡೆದ ಆಯಿಶಾ, 2014ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೆ ರ್ಯಾಂಕ್ ಪಡೆದಿದ್ದರು. ಪಿಯಸಿಯಲ್ಲಿ ರಾಜ್ಯದ 10 ಟಾಪರ್‌ಗಳಲ್ಲಿ ಒಬ್ಬರಾಗಿದ್ದರು. ಇದೀಗ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಇವರು ಕಿಲ್ಲೂರಿನ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕುಂತೂರು ಹಾಗು ಉಮೈಮಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News