ಹತ್ಯೆಗೆ ಸಂಚು: ಐದು ಮಂದಿ ಆರೋಪಿಗಳ ಬಂಧನ
Update: 2017-08-29 23:06 IST
ಉಳ್ಳಾಲ, ಆ. 29: ಯುವಕರಿಬ್ಬರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾದ ಐದು ಮಂದಿ ಆರೋಪಿಗಳನ್ನು ಎಸಿಪಿ ನೇತೃತ್ವದ ವಿಶೇಷ ತಂಡ ಉಳ್ಳಾಲ ಪೊಲೀಸರ ಸಹಕಾರದೊಂದಿಗೆ ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮದನಿ ನಗರ ನಿವಾಸಿ ತಸ್ಗೀಂ (24), ಅಂಬ್ಲಮೊಗರು ನೌಷಾದ್ (32), ರಮೀಝ್ (20), ಖುರ್ಷಿದ್ (20) ಹಾಗೂ ನವಾಝ್ (24) ಎಂದು ಗುರುತಿಸಲಾಗಿದೆ.
ಆರೋಪಿಗಳು ಜೂ. 18ರಂದು ಮುನ್ನೂರು ನಿವಾಸಿ ಗಂಗಾಧರ್ ಎಂಬವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. 2016ರ ಎಪ್ರಿಲ್‌ನಲ್ಲಿ ಉಳ್ಳಾಲ ಒಳಪೇಟೆಯಲ್ಲಿ ಹತ್ಯೆಗೀಡಾದ ಪಿಲಾರು ನಿವಾಸಿ ಸಫ್ವಾನ್ ಕೊಲೆಗೆ ಪ್ರತೀಕಾರವಾಗಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ರಾಣಿಪುರದಲ್ಲಿ ಹಲ್ಲೆಗೊಳಗಾದ ರಾಮ್ ಮೋಹನ್ ಹಾಗೂ ಚಿರಂಜೀವಿ ಪ್ರಕರಣ ತನಿಖೆಯ ವೇಳೆ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ ಎಂದು ವಿಚಾರಣೆ ನಡೆಸುತ್ತಿರುವ ಉಳ್ಳಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.