ನಾನು ಹೇಳಿದ್ದ ಸುಪಾರಿ ನೀಡಿದ ’ಮೇಡಂ’ ಕಾವ್ಯ ಮಾಧವನ್: ಪಲ್ಸರ್ ಸುನೀ
ಕೊಚ್ಚಿ,ಆ. 30: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಾನು ಈ ಹಿಂದೆ ಹೇಳಿದ್ದ ‘ಮೇಡಂ’ ಕಾವ್ಯಮಾಧವನ್ ಎಂದು ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನೀ ಹೇಳಿದ್ದಾನೆ. ಇಂದು ಎರ್ನಾಕುಲಂ ಸಿಜಿಎಂ ಕೋರ್ಟಿಗೆ ಹಾಜರು ಪಡಿಸಲು ಆತನನ್ನು ಕರೆತಂದಾಗ ಪತ್ರಕರ್ತರಿಗೆ ಸುನೀ ಈ ವಿಷಯವನ್ನು ತಿಳಿಸಿದ್ದಾನೆ. ಹಿರಿಯ ನಟಿಯನ್ನು ಅಪಹರಣ ನಡೆಸಿದ ಪ್ರಕರಣದಲ್ಲಿ ರಿಮಾಂಡ್ ಕಾಲಾವಧಿ ಕೊನೆಗೊಂಡಿದ್ದ ಹಿನ್ನೆಲೆಯಲ್ಲಿ ಸುನೀಯನ್ನು ಇಂದು ಸಿಜೆಎಂ ಕೋರ್ಟಿಗೆ ಹಾಜರುಪಡಿಸಲಾಗಿತ್ತು.
ತಾನು ಸುಳ್ಳುಗಾರನಲ್ಲವೇ, ಸುಳ್ಳುಗಾರನ ಮಾತನ್ನು ಯಾಕೆ ಕೇಳುತ್ತೀರಿ ಎಂದು ಪಲ್ಸರ್ ಸುನೀ ಪತ್ರಕರ್ತರನ್ನು ಪ್ರಶ್ನಿಸಿದ್ದಾನೆ. ‘ಮೇಡಂ’ ಯಾರೆಂದು ಈ ಹಿಂದೆಯೇ ಸೂಚಿಸಿದ್ದೇನೆ. ನನ್ನ ‘ಮೇಡಂ’ ಕಾವ್ಯಾ ಆಗಿದ್ದಾರೆ ಎಂದು ಸುನೀ ಪತ್ರಕರ್ತರಿಗೆ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆಯೇ ಸುನೀ ‘ಮೇಡಂ’ ಎನ್ನುವ ಪ್ರಸ್ತಾವ ಮಾಡಿದ್ದಾನೆ. ನಂತರ ಇದರ ಕುರಿತು ಹಲವು ಉಹಾಪೋಹಗಳು ಎದಿದ್ದವು. ಆದರೆ ‘ಮೇಡಂ’ ಯಾರೆಂದು ಸುನೀ ಹೇಳಿರಲಿಲ್ಲ. ಕಳೆದ ಬಾರಿ ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಕರೆತಂದಾಗ ಆ ‘ಮೇಡಂ’ ಯಾರೆಂದು ತಾನು ಬಹಿರಂಗೊಳಿಸುವೆ ಎಂದಿದ್ದಾನೆ. ಆದರೆ ಅಂಗಮಾಲಿ ಕೋರ್ಟಿಗೆ ಪೊಲೀಸರು ಸುನೀಯನ್ನು ಕರೆತಂದಿರಲಿಲ್ಲ. ಕಾವ್ಯಾ ತನ್ನ ಬಗ್ಗೆ ಗೊತ್ತಿಲ್ಲ ಎಂದಿದ್ದು ಸುಳ್ಳು ಎಂದು ಕಳೆದ ಬಾರಿ ಕೋರ್ಟಿಗೆ ಕರೆತಂದಿದ್ದಾಗ ಸುನೀ ಹೇಳಿದ್ದ.
ತನಗೆ ಸುಪಾರಿ ನೀಡಿದ್ದು ಓರ್ವ ‘ಮೇಡಂ’ ಎಂದು ಸುನೀ ತನ್ನೊಂದಿಗೆ ಹೇಳಿದ್ದಾನೆ ಎಂದು ಕಿರುಕುಳಕ್ಕೊಗಾದ ನಟಿಯು ಪೊಲೀಸರಿಗೆ ತಿಳಿಸಿದ್ದರು. ಆದರೆ, ಇದು ತನಿಖೆಯ ದಾರಿ ತಪ್ಪಿಸಲು ಸುನೀ ಹೂಡಿದ ಆಟವೆಂದು ಪೊಲೀಸರು ಶಂಕಿಸಿದ್ದರು. ಆದರೆ ನಟಿಗೆ ಕಿರುಕುಳ ನೀಡಿದ ಘಟನೆಯ ಹಿಂದೆ ಓರ್ವ ‘ಮೇಡಂ’ ಇದ್ದಾರೆ ಎಂದು ವಕೀಲ ಫೆನಿಬಾಲಕೃಷ್ಣನ್ ಬಹಿರಂಗಪಡಿಸಿದ್ದರು. ಪಲ್ಸರ್ ಸುನೀಗೆ ಜಾಮೀನಿಗಾಗಿ ಬಂದವರು ‘ಮೇಡಂ’ ಕುರಿತು ಸೂಚಿಸಿದ್ದರು ಎಂದು ವಕೀಲ ಫೆನಿ ಬಾಲಕೃಷ್ಣನ್ ಹೇಳಿದ್ದರು. ನಟಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರಕುವ ಕುರಿತ ವಿಷಯಗಳನ್ನು ತನ್ನೊಡನೆ ಚರ್ಚಿಸಲು ಅವರು ಬಂದಿದ್ದರು. ನಂತರ ‘ಮೇಡಂ’ ರೊಂದಿಗೆ ಸಮಾಲೋಚಿಸಿ ಹೇಳುತ್ತೇವೆ ಎಂದು ಹೇಳಿ ಅವರು ಹೊರಟು ಹೋಗಿದ್ದರು ಎಂದು ಫೆನಿ ಬಾಲಕೃಷ್ಣನ್ ಹೇಳಿದ್ದರು.