ಜಮಾಅತೆ ಇಸ್ಲಾಮೀ ಹಿಂದ್‌ನಿಂದ ದ್ವಿಚಕ್ರ ವಾಹನ ಹಸ್ತಾಂತರ
ಪಡುಬಿದ್ರೆ, ಆ. 30: ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲ ಇದರ ವತಿಯಿಂದ ಕಂಚಿನಡ್ಕದ ನಿವಾಸಿ ವಿಕಲಚೇತನ ವ್ಯಕ್ತಿಯೋರ್ವರಿಗೆ ವಿಶೇ ವಾಹನವೊಂದನ್ನು ನೀಡಲಾಯಿತು.
ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಅಬ್ದುಲ್ ಶರೀಫ್ (39) ಎಂಬವರು ವಿಕಲಚೇತನರಾಗಿದ್ದು, ಇವರ ಅಂಗವೈಕಲ್ಯದ ಬಗ್ಗೆ ಅರಿತ ಕಾಪು ವರ್ತುಲ ಜಮಾಅತೆ ಇಸ್ಲಾಮೀ ಹಿಂದ್ ರೂ. 86,610 ಮೌಲ್ಯದ ವಾಹನವನ್ನು ಬುಧವಾರ ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.
ಈ ಬಗ್ಗೆ ಮಾತನಾಡಿದ ಕಾಪು ವರ್ತುಲ ಸ್ಥಾನೀಯ ಅಧ್ಯಕ್ಷ ಅನ್ವರ್ ಆಲಿ ಮಾತನಾಡಿ, ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರದಾದ್ಯಂತ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಶಾಂತಿ ಸೌಹಾರ್ದತೆಗಾಗಿ ಕಾರ್ಯನಿರ್ವಹಿಸುತ್ತಿದೆ. ಅರ್ಹ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ಅರ್ಹ ಬಡ ಮಹಿಳೆಯರಿಗೆ, ವೃದ್ಧ ಮಹಿಳೆ, ಪುರುಷರಿಗೆ ಮಾಸಾಶನ ನೀಡುವುದು. ಕಡುಬಡವರಿಗೆ ಸೇವೆ ನೀಡುವ ಮೂಲಕ ಹಲವಾರು ಸೇವೆಗಳ ನೀಡುತ್ತಿರುವುದಾಗಿ ಹೇಳಿದರು. ಈ ವೇಳೆ ಮುಹಮ್ಮದ್ ಇಕ್ಬಾಲ್ ಮಜೂರು, ಸಯ್ಯದ್ ಇರ್ಷಾದ್ ಮೂಳೂರು, ಮುಹಮ್ಮದ್ ಆಲಿ ಮಜೂರು, ಇಬ್ರಾಹಿಂ ಫೈಲ್ವಾನ್ ಬೆಳಪು ಇದ್ದರು.