ನಾರಾಯಣ ಗುರು ಜಯಂತಿ ಪೂರ್ವಭಾವಿ ಸಭೆ
ಉಡುಪಿ, ಆ.30: ಉಡುಪಿ ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸೆ.6ರಂದು ಬನ್ನಂಜೆಯಲ್ಲಿರುವ ನಾರಾಯಣ ಗುರು ಸಭಾ ಭವನದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾರಾಯಣ ಗುರು ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾರಾಯಣ ಗುರು ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ, ನಾರಾಯಣಗುರುಗಳ ತತ್ವ ಮತ್ತು ವಿಚಾರ ಧಾರೆ ಕುರಿತು ಬಾಷಣ ಸ್ಪರ್ಧೆ ಏರ್ಪಡಿಸುವಂತೆ ಹಾಗೂ ಜಿಲ್ಲೆಯಲ್ಲಿ ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕುರಿತಂತೆ ಜಿಪಂ ಸದಸ್ಯ ಜನಾರ್ದನ ತೋನ್ಸೆ ಸಲಹೆ ನೀಡಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಹಾಗೂ ಪಿಯು ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಅನುರಾಧ ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಯ್ಯ, ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ, ಬಿಲ್ಲವ ಸಂಘದ ಅಧ್ಯಕ್ಷ ಬಿಬಿ ಪೂಜಾರಿ, ಕಾರ್ಯದರ್ಶಿ ಮಾಧವ ಬನ್ನಂಜೆ, ಬಿಲ್ಲವ ಒಕ್ಕೂಟದ ಕಾರ್ಯದರ್ಶಿ ಶಿವಾಜಿ ಸುವರ್ಣ, ಉಡುಪಿ ಮಾನವೋತ್ಥಾನ ಸೇವಾ ಸಮಿತಿ ಯ ಜಿಲ್ಲಾ ಕಾರ್ಯದರ್ಶಿ ಸುಂದರ್ ಜತ್ತನ್ನ, ಸುಧಾಕರ ಪೂಜಾರಿ, ದೇವದಾಸ ಆರ್. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸೆಯಲ್ಲಿಕನ್ನಡಮತ್ತುಸಂಸ್ಕೃತಿಇಲಾಖೆಯಸಹಾಯಕನಿರ್ದೇಶಕಮಹಾದೇವಯ್ಯ,ತಾಂತ್ರಿಕಮೇಲ್ವಿಚಾರಕಿಪೂರ್ಣಿಮಾ,ಬಿಲ್ಲವಸಂಘದಅ್ಯಕ್ಷ ಬಿಬಿ ಪೂಜಾರಿ, ಕಾರ್ಯದರ್ಶಿ ಮಾವಬನ್ನಂಜೆ, ಬಿಲ್ಲವ ಒಕ್ಕೂಟದ ಕಾರ್ಯದರ್ಶಿ ಶಿವಾಜಿ ಸುವರ್ಣ, ಉಡುಪಿ ಮಾನವೋತ್ಥಾನ ಸೇವಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸುಂದರ್ ಜತ್ತನ್ನ, ಸುಧಾಕರ ಪೂಜಾರಿ, ದೇವದಾಸ ಆರ್. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.