×
Ad

ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸಾಧನೆ

Update: 2017-08-30 22:48 IST

ಭಟ್ಕಳ, ಆ. 30: ಜಿಎಸ್‌ಬಿ ಸಮಾಜ ಕಾರ್ಕಳ ಇವರ ವತಿಯಿಂದ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಶಟಲ್ ಟೂರ್ನಾಮೆಂಟ್(ಡಬಲ್ಸ್)ನಲ್ಲಿ ಭಟ್ಕಳದ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗ ಉತ್ತಮ ಸಾಧನೆ ತೋರಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾರ್ಕಳದ ಜೋನ್ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಶಟಲ್ ಟೂರ್ನಾಮೆಂಟ್‌ನಲ್ಲಿ ರಾಜ್ಯದ ಬೆಂಗಳೂರು, ಮಂಗಳೂರು, ಮಣಿಪಾಲ, ಉಡುಪಿ, ಕುಂದಾಪುರ, ಭಟ್ಕಳ ಸೇರಿದಂತೆ ವಿವಿಧೆಡೆಯಿಂದ ಸುಮಾರು 50 ತಂಡಗಳು ಭಾಗವಹಿಸಿದ್ದವು. ಸೆಮಿಪೈನಲ್ ಹಂತದಲ್ಲಿ ಮಣಿಪಾಲ ಮತ್ತು ಕಾರ್ಕಳ ತಂಡ, ಮಂಗಳೂರು ಮತ್ತು ಭಟ್ಕಳ ತಂಡದ ನಡುವೆ ಸೆಣಸಾಟ ನಡೆದಿತ್ತು. ಪೈನಲ್ ಪ್ರವೇಶಿಸಿದ ಕಾರ್ಕಳ ಮತ್ತು ಭಟ್ಕಳ ತಂಡದ ನಡುವೆ ನಡೆದ ಹಣಾಹಣಿಯಲ್ಲಿ ಭಟ್ಕಳ ತಂಡ ವಿಜಯಿಯಾಗಿ ನಗದು ಮತ್ತು ರಾಜ್ಯಮಟ್ಟದ ಜಿಎಸ್‌ಬಿ ಪ್ರಶಸ್ತಿಯನ್ನು ತನ್ನ ಮುಡೀಗೆರಿಸಿಕೊಂಡಿದೆ. ಭಟ್ಕಳದ ತಂಡದ ಪರವಾಗಿ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗ ಪಂದ್ಯಾಟದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News