×
Ad

‘ಸಾಮರಸ್ಯದ ನಡಿಗೆ’ಗೆ ಮುಸ್ಲಿಂ ಒಕ್ಕೂಟ ಬೆಂಬಲ

Update: 2017-08-30 22:49 IST

ಮಂಗಳೂರು, ಆ. 30: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಆಯೋಜಿಸಲಾಗಿರುವ ಸೆ.12ರ ಫರಂಗಿಪೇಟೆಯಿಂದ ಮಾಣಿವರೆಗಿನ ‘ಸಾಮರಸ್ಯದ ನಡಿಗೆ’ಪಾದಯಾತ್ರೆಗೆ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳು ಒಕ್ಕೂಟ ಬೆಂಬಲಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಪುನರ್ ಸ್ಥಾಪನೆಯ ಉದ್ದೇಶದಿಂದ ಸಚಿವರ ನೇತೃತ್ವದಲ್ಲಿ ಪಕ್ಷರಹಿತವಾದ ಕಾಲ್ನಡಿಗೆಯು ಶಾಂತಿ ಸ್ಥಾಪನೆಗೆ ನಡೆಸಿದ ಉತ್ತಮ ಪ್ರಯತ್ನವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೆ.1ರ ಸರಕಾರಿ ರಜೆಗೆ ಕೃತಜ್ಞತೆ
ಮುಸ್ಲಿಂ ಒಕ್ಕೂಟದ ಮನವಿಗೆ ಸ್ಪಂದಿಸಿ ಸರಕಾರ ಸೆ.1ಕ್ಕೆ ಸರಕಾರ ರಜೆ ಘೋಷಿಸಿರುವುದಕ್ಕೆ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಇದಕ್ಕೆ ಪ್ರಯತ್ನಿಸಿರುವ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಸರಕಾರಿ ಮುಖ್ಯಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಬಾವ ಅವರನ್ನು ಒಕ್ಕೂಟ ಕೃತಜ್ಞತೆ ಸಲ್ಲಿಸುವುದಾಗಿ ಅಶ್ರಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News