ಕೊಟ್ರಪಾಡಿಯಲ್ಲಿ ಸಿರಿ ಪುರಾತತ್ವ ಅನ್ವೇಷಣೆ
ಉಡುಪಿ, ಆ.30: ತುಳುನಾಡಿನ ಜನಪ್ರಿಯ ದೈವಗಳಲ್ಲಿ ಸಿರಿಯೂ ಒಂದು. ಸಿರಿ ತನ್ನ ಜೀವನದ ಕೊನೆಯ ಭಾಗವನ್ನು ಕಳೆದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಕೊಟ್ರಪಾಡಿಯಲ್ಲಿ ಸಿರಿ ಪುರಾತತ್ವ ಅನ್ವೇಷಣೆ ಯೋಜನೆಗೆ ಐಕಳದ ಪೊಂಪೈ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ.ವಿಶ್ವಿತ್ ಶೆಟ್ಟಿ ಅಧಿಕೃತ ಚಾಲನೆ ನೀಡಿದ್ದಾರೆ ಎಂದು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಶಿರ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿರಿಯ ಕುರಿತಂತೆ ಭಾರತ ಹಾಗೂ ಫಿನ್ಲೆಂಡಿನ ಜಾನಪದ ವಿದ್ವಾಂಸರು ಜಾನಪದೀಯ ನೆಲೆಯಲ್ಲಿ ವಿಸೃತವಾದ ಅಧ್ಯಯನ ನಡೆಸಿದ್ದಾರೆ. ಆದರೆ, ಚಾರಿತ್ರಿಕ ಮತ್ತು ಪುರಾತತ್ವ ನೆಲೆಯಲ್ಲಿ ಸಿರಿಯ ವಿಸೃತವಾದ ಅಧ್ಯಯನಗಳು ಈವರೆಗೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತುತಿ ಪುರಾತತ್ವ ವಿಭಾಗದ ವತಿಯಿಂದ ಒಂದು ವರ್ಷದ ಸಿರಿ ಪುರಾತತ್ವ ಅನ್ವೇಷಣೆ ಯೋಜನೆಯನ್ನು ಕೈಗೊಳ್ಳಲಾಗಿದೆ.
ಸಿರಿಯ ಕುರಿತಂತೆ ಭಾರತ ಹಾಗೂ ಫಿನ್ಲೆಂಡಿನ ಜಾನಪದ ವಿದ್ವಾಂಸರು ಜಾನಪದೀಯ ನೆಲೆಯಲ್ಲಿ ವಿಸೃತವಾದ ಅಧ್ಯಯನ ನಡೆಸಿದ್ದಾರೆ. ಆದರೆ, ಚಾರಿತ್ರಿಕ ಮತ್ತು ಪುರಾತತ್ವ ನೆಲೆಯಲ್ಲಿ ಸಿರಿಯ ವಿಸೃತವಾದ ಅ್ಯಯನಗಳು ಈವರೆಗೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ವತಿಯಿಂದ ಒಂದು ವರ್ಷದ ಸಿರಿ ಪುರಾತತ್ವ ಅನ್ವೇಷಣೆ ಯೋಜನೆಯನ್ನು ಕೈಗೊಳ್ಳಲಾಗಿದೆ. ಸಿರಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳಲ್ಲಿ ಪುರಾತತ್ವ ಅನ್ವೇಷಣೆಗಳನ್ನು ಕೈಗೊಳ್ಳಲಾಗುತ್ತದೆ. ಈ ಅನ್ವೇಷಣೆಯ ಫಲಿತಾಂಶಗಳನ್ನು ಸಿರಿ ಪುರಾತತ್ವ ಸಂಪುಟ ಹೆಸರಿನಲ್ಲಿ ಹೊರತರಲು ಉದ್ದೇಶಿಸಲಾಗಿದೆ ಎಂದು ಯೋಜನೆಯ ಮುಖ್ಯಸ್ಥರಾಗಿರು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.