ಕಾರು ಢಿಕ್ಕಿ: ಹೊಂಡಕ್ಕೆ ಉರುಳಿ ಬಿದ್ದ ರಿಕ್ಷಾ
Update: 2017-08-30 23:40 IST
ಕೊಣಾಜೆ, ಆ. 30: ರಿಕ್ಷಾವೊಂದಕ್ಕೆ ಹಿಂಬಂದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ಕೊಣಾಜೆ ನಡುಪದವು ಸಮೀಪದ ಪಿ.ಎ.ಕಾಲೇಜು ಬಳಿ ಬುಧವಾರ ನಡೆದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಂಬ್ಲಪದವಿನ ರಿಕ್ಷಾ ಚಾಲಕ ವಿಶು ಗಾಯಗೊಂಡವರು ಎಂದು ಗುರುತಿಸಲಾಗಿದೆ. ಇವರು ಕಂಬ್ಲಪದವಿನಿಂದ ಪಿ.ಎ.ಕಾಲೇಜು ಕಡೆ ಬರುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಹಿಂಬದಿಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾವು ನಿಯಂತ್ರಣ ತಪ್ಪಿ ಬೃಹತ್ ಇಳಿಜಾರು ಪ್ರದೇಶದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.