×
Ad

ಬೆನಝೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಮುಷರ್ರಫ್ ತಲೆಮರೆಸಿಕೊಂಡಿರುವ ಆರೋಪಿ

Update: 2017-08-31 17:04 IST

ಹೊಸದಿಲ್ಲಿ, ಆ.31: ಪಾಕ್ ನ ಮಾಜಿ ಪ್ರಧಾನ ಮಂತ್ರಿ ಬೆನಝೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಫರ್ವೇಝ್ ಮುಷರ್ರಫ್ ತಲೆಮರೆಸಿಕೊಂಡಿರುವ ಆರೋಪಿ ಎಂದು ಪಾಕಿಸ್ತಾನದ ನ್ಯಾಯಾಲಯ ಘೋಷಿಸಿದ್ದು, ಮುಷರ್ರಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದೆ.

2013ರಲ್ಲಿ ಮುಷರ್ರಫ್ ವಿರುದ್ಧ ಭುಟ್ಟೋ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯವು 17 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

2007ರ ಡಿಸೆಂಬರ್ 27ರಂದು ಬಾಂಬ್ ಮತ್ತು ಗನ್ ದಾಳಿಯೊಂದರಲ್ಲಿ ಬೆನಝೀರ್ ಭುಟ್ಟೊ ಅವರನ್ನು ಕೊಲೆಗೈಯಲಾಗಿತ್ತು. ಈ ಹತ್ಯೆಯ ಬಗ್ಗೆ ತನಿಖೆ ಆರಂಭವಾದ ನಂತರ ಪ್ರಕರಣವು ಅನೇಕ ಏರಿಳಿತಗಳನ್ನು ಕಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News