ಯುವ ಜನತೆ ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳಬೇಕು: ಆನಂದ್ ಕುಂದರ್
ಉಡುಪಿ, ಆ.31: ಯುವ ಸಮುದಾಯದಲ್ಲಿ ವಿಶೇಷವಾದ ಶಕ್ತಿ ಸಾಮರ್ಥ್ಯ ಗಳಿದ್ದು ಅವರು ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಿಸಲು ವೇದಿಕೆ ದೊರೆಯುತ್ತದೆ. ಹಾಗೂ ಇದರಿಂದ ಜೀವನದಲ್ಲಿ ಅಧ್ಬುತವಾದ ಯಶಸ್ಸನ್ನು ಸಾಧಿಸಬಹುದು ಎಂದು ಖ್ಯಾತ ಉದ್ಯಮಿ ಹಾಗೂ ಉಡುಪಿ ಜಿಲ್ಲಾ ಸ್ಕೌಟ್ ಸಂಸ್ಥೆಯ ಉಪಾಧ್ಯಕ್ಷ ಆನಂದ ಸಿ. ಕುಂದರ್ ಹೇಳಿದ್ದಾರೆ.
ಮಣಿಪಾಲದ ಪ್ರಗತಿನಗರದಲ್ಲಿರುವ ಡಾ.ವಿ.ಎಸ್.ಅಚಾರ್ಯ ಸ್ಕೌಟ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಬೆಂಗಳೂರು-ಮೈಸೂರು ವಿಭಾಗ ಮಟ್ಟದ ಪಯೋನಿಯರಿಂಗ್ ಮತ್ತು ಸಾಹಸ ಶಿಬಿರವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಶಾಂತಾ ವಿ.ಎಸ್ ಅಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯದ ಒಟ್ಟು 16 ಜಿಲ್ಲೆಗಳಿಂದ 212 ರೋವರ್ಸ್ ಮತ್ತು ರೇಂ ಜರ್ಸ್ ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪದಾಧಿಕಾರಿಗಳಾದ ಎಡ್ಮಿನ್ ಅಳ್ವ, ಜ್ಯೋತಿ ಹೆಬ್ಬಾರ್, ಜ್ಯೋತಿ ಜೆ. ಪೈ, ಐಕೆ ಜಯಚಂದ್ರ, ಶಿಬಿರಾಧಿಕಾರಿಗಳಾದ ಡೇನಿಯಲ್ ಸುಕುಮಾರ್, ಪ್ಲೋರಿನ್ ಡಿಸಿಲ್ವ, ಸುಮನ್ ಶೇಖರ್, ಸಾವಿತ್ರಿ ಮನೋಹರ್, ಡಾ.ರವಿ ಎಂ.ಎನ್ ಹಾಗೂ ಎಂ.ಸುರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಪದಾಧಿಕಾರಿಗಳಾದ ಎಡ್ಮಿನ್ ಅಳ್ವ, ಜ್ಯೋತಿ ಹೆಬ್ಬಾರ್, ಜ್ಯೋತಿ ಜೆ. ಪೈ, ಐಕೆ ಜಯಚಂದ್ರ, ಶಿಬಿರಾಧಿಕಾರಿಗಳಾದ ಡೇನಿಯಲ್ ಸುಕುಮಾರ್, ಪ್ಲೋರಿನ್ ಡಿಸಿಲ್ವ, ಸುಮನ್ ಶೇಖರ್, ಸಾವಿತ್ರಿ ಮನೋಹರ್, ಡಾ.ರವಿ ಎಂ.ಎನ್ ಹಾಗೂ ಎಂ.ಸುರೇಶ್ ಉಪಸ್ಥಿತರಿದ್ದರು. ಜಿಲ್ಲಾ ಸ್ಕೌಟ್ ಆಯುಕ್ತ ಡಾ. ವಿಜಯೇಂದ್ರ ವಿ. ರಾವ್ ಸ್ವಾಗತಿಸಿದರು. ಡಾ.ಜಯರಾಮ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿ ಜಿಲ್ಲಾ ಸಂಘಟಕ ನಿತಿನ್ ಅಮಿನ್ ವಂದಿಸಿದರು.