×
Ad

ಪಡಿತರ ಪಡೆಯುವ ಅವಧಿ ವಿಸ್ತರಣೆ: ಖಾದರ್‌

Update: 2017-08-31 22:20 IST

ಮಂಗಳೂರು, ಆ.31: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಆಗಸ್ಟ್ ತಿಂಗಳ 31ರವರೆಗೆ ಇದ್ದ ಅವಧಿಯನ್ನು ಸೆ.7ರವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಪಡಿತರ ಚೀಟಿದಾರರಿಗೆ ತೂಕದಲ್ಲಾಗುವ ಮೋಸವನ್ನು ತಡೆಗಟ್ಟುವ ಹಾಗೂ ಅಧಿಕೃತ ತೂಕದ ಯಂತ್ರಗಳ ಬಳಕೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಮತ್ತು ಕೇಂದ್ರ ಸರಕಾರದಿಂದ ಅನುಮೋದನೆ ಹೊಂದಿಲ್ಲದ ತೂಕದ ಯಂತ್ರಗಳ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಪಡಿತರ ಚೀಟಿದಾರರನ್ನು ತೂಕದಲ್ಲಿ ಮೋಸ ಮಾಡಬಲ್ಲ ಇಂತಗ ಕಳಪೆ ಗುಣಮಟ್ಟದ ತೂಕದ ಯಂತ್ರಗಳ ಬಳಕೆಗೆ ಕಡಿವಾಣ ಹಾಕಿ ಪಾಯಿಂಟ್ ಆಫ್ ಸೇಲ್ ತೂಕದ ಯಂತ್ರ ಅಳವಡಿಸಲು ನಿರ್ದೇಶನ ನೀಡಲಾಗಿದೆ. ಆದರೆ, ಹೆಚ್ಚಿನ ನ್ಯಾಯಬೆಲೆ ಅಂಗಡಿಗಳು ಇಂತಹ ಯಂತ್ರಗಳು ಅಳವಡಿಸಲು ವಿಳಂಬ ಮಾಡಿರುವುದರಿಂದ ಆಗಸ್ಟ್ ತಿಂಗಳ ಪಡಿತರ ಆಹಾರಧಾನ್ಯಗಳನ್ನು ಸೆ.7ರವರೆಗೆ ಪಡೆಯಬಹುದು ಎಂದು ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News