ದೋಣಿ ಅವಘಡ: ಇಬ್ಬರ ರಕ್ಷಣೆ
Update: 2017-08-31 22:31 IST
ಗಂಗೊಳ್ಳಿ, ಆ.31: ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲಿನಲ್ಲಿ ಇಂದು ಬೆಳಗ್ಗೆ ಕಡಲಿನ ಅಬ್ಬರಕ್ಕೆ ಅವಘಡಕ್ಕೀಡಾದ ದೋಣಿಯಿಂದ ನೀರಿಗೆ ಬಿದ್ದು ಮುಳುಗುತ್ತಿದ್ದ ಇಬ್ಬರು ಮೀನುಗಾರರನ್ನು ರಕ್ಷಿಸಲಾಗಿದೆ.
ಗಂಗೊಳ್ಳಿಯ ಭಾಸ್ಕರ ಖಾರ್ವಿ(40) ಹಾಗೂ ಕರುಣ ಪೂಜಾರಿ(42) ಎಂಬವರು ರಕ್ಷಿಸಲ್ಪಟ್ಟ ಮೀನುಗಾರರು. ಇವರು ಇಂದು ಬೆಳಗ್ಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು, ಅಳಿವೆ ಬಾಗಿಲಿನಲ್ಲಿ ಕಡಲಿನ ಅಬ್ಬರಕ್ಕೆ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ದೋಣಿಯಲ್ಲಿದ್ದ ಇಬ್ಬರು ನೀರಿಗೆ ಬಿದ್ದರು.
ಕೂಡಲೇ ಅಲ್ಲೇ ಇದ್ದ ಇತರ ದೋಣಿ ಮೀನುಗಾರರು ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದರು. ಈ ವೇಳೆ ಗಾಯಗೊಂಡ ಭಾಸ್ಕರ ಖಾರ್ವಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.