ವಿದ್ಯಾರ್ಥಿನಿ ಆತ್ಮಹತ್ಯೆ
Update: 2017-08-31 22:34 IST
ಉಡುಪಿ, ಆ.31: ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಡಬೆಟ್ಟು ಕಾನ್ವೆಂಟ್ ರಸ್ತೆಯ ವಸತಿ ಸಮುಚ್ಛಯ ದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಉಮೇಶ್ ಕಾಮತ್ ಎಂಬವರ ಮಗಳು ಗೌರಿ ಕಾಮತ್(15) ಮೃತ ಬಾಲಕಿ. ಉಡುಪಿಯ ಕಾನ್ವೆಂಟ್ ಶಾಲೆಯ 10ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಗೌರಿ, ರಾತ್ರಿ ಊಟ ಮಾಡಿ ಮಲಗಿದ್ದಳು. ಇಂದು ಬೆಳಗ್ಗೆ ತಂದೆ ಮಗಳನ್ನು ಎಬ್ಬಿಸಲು ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಅಗ್ನಿ ಶಾಮಕ ದಳದವರನ್ನು ಕರೆಸಿ ಬಾಗಿಲು ಮುರಿದು ಒಳಗೆ ಪ್ರವೇಶಿಸಲಾಯಿತು.
ಈ ಸಂದರ್ಭ ಗೌರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ರುವುದು ಕಂಡುಬಂತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆಕೆ ತಂದೆ ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.