×
Ad

ಚೂರಿ ಇರಿತ ನಡೆಸುವ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಲು ಒತ್ತಾಯಿಸಿ ಮನವಿ

Update: 2017-08-31 22:49 IST

ಮಂಗಳೂರು, ಆ. 31: ಚೂರಿ ಇರಿತಕ್ಕೆ ಒಳಗಾದ ಚಿರಂಜೀವಿ ಎಂಬವರಿಗೆ ಚಿಕಿತ್ಸಾ ವೆಚ್ಚ ಮತ್ತು ವೈಯಕ್ತಿಕ ಪರಿಹಾರಕ್ಕೆ ಆಗ್ರಹಿಸಿ, ಕೊಣಾಜೆ ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಚೂರಿ ಇರಿತ ಕೃತ್ಯ ನಡೆಸುವ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಲು ಒತ್ತಾಯಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮೀಷನರ್ ಅವರಿಗೆ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ನಿಯೋಗದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಉಳ್ಳಾಲ ವಲಯ ಅಧ್ಯಕ್ಷ ಜೀವನಂರಾಜ್ ಕುತ್ತಾರ್, ಉಳ್ಳಾಲ ಮುಖಂಡರಾದ ಸುನಿಲ್ ತೇವುಲ, ರಫೀಕ್ ಹರೇಕಳ, ದಾಳಿಗೊಳಗಾದ ಚಿರಂಜೀವಿ ಮತ್ತು ಚಿರಂಜೀವಿಯ ತಂದೆ ನಾಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News