×
Ad

ಗುರ್ಮೀತ್ ದತ್ತು ಪುತ್ರಿ ಹನಿಪ್ರೀತ್ ಪತ್ತೆಗಾಗಿ ಪೊಲೀಸರಿಂದ ತೀವ್ರ ಶೋಧ

Update: 2017-09-01 10:24 IST

ಹೊಸದಿಲ್ಲಿ,ಸೆ.1: ಅತ್ಯಾಚಾರ ಆರೋಪದಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ಸಿಂಗ್‌ನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ವಿರುದ್ಧ ಶುಕ್ರವಾರ ಹರ್ಯಾಣ ಪೊಲೀಸರು ಲುಕ್‌ಔಟ್ ನೊಟೀಸ್ ಜಾರಿ ಮಾಡಿದ್ದಾರೆ. ಯಾವುದೇ ಕ್ಷಣದಲ್ಲಿ ಆಕೆಯನ್ನು ಬಂಧಿಸುವ ಸಾಧ್ಯತೆಯಿದೆ.

ಹನಿಪ್ರೀತ್ ಕಳೆದ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಹನಿಪ್ರೀತ್ ರೋಹ್ಟಕ್‌ನಲ್ಲಿರುವ ಡೇರಾ ಬೆಂಬಲಿಗರ ಮನೆಯಲ್ಲಿ ಅಡಗಿಕುಳಿತ್ತಿದ್ದಾರೆ ಎಂದು ವರದಿಯಾಗಿದೆ.

 ಕಳೆದ ಶುಕ್ರವಾರ ಗುರ್ಮಿತ್‌ಗೆ ರೇಪ್ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ಹರ್ಯಾಣದ ಪಂಚಕುಲ ನ್ಯಾಯಾಲಯದ ಸಂಕೀರ್ಣದಿಂದ ಗುರ್ಮಿತ್‌ರೊಂದಿಗೆ ವಿಮಾನದಲ್ಲಿ ಹನಿಪ್ರೀತ್ ತೆರಳಲು ಅವಕಾಶ ಸಿಕ್ಕಿದ್ದು ಹೇಗೆಂಬ ಬಗ್ಗೆ ಹರ್ಯಾಣ ಸರಕಾರ ತನಿಖೆ ನಡೆಸುತ್ತಿದೆ. ಹನಿಪ್ರೀತ್ ವಿಮಾನದಲ್ಲಿ ಮನ್‌ಪ್ರಿತ್ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ್ದರು.

ಡೇರಾ ಸಚ್ಚಾ ಸೌದಾದ ಉತ್ತರಾಧಿಕಾರಿಯೆಂದೇ ಬಿಂಬಿತವಾಗುತ್ತಿರುವ ಹನಿಪ್ರೀತ್ ಆ.25 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಗುರ್ಮಿತ್ ಜೊತೆಗಿದ್ದು, ಗುರ್ಮಿತ್ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News