ಸಿಸಿಟಿವಿ ಪುಡಿಗೈದು ದೇವಸ್ಥಾನದಲ್ಲಿ ಕಳವು

Update: 2017-09-01 05:34 GMT

ಸುಬ್ರಹ್ಮಣ್ಯ, ಸೆ.1: ಇಲ್ಲಿನ ಸುಬ್ರಹ್ಮಣ್ಯದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ವಿಗ್ರಹ, ಆಭರಣ ಕಳವುಗೈದ ಘಟನೆ ನಡೆದಿದೆ.

ದೇವಸ್ಥಾನಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿ ಪುಡಿಗೈದು ಕೃತ್ಯ ಕಳರು ದೇವಸ್ಥಾನದ ಒಳ ನುಗ್ಗಿ ದೇವಿಯ ಪ್ರಾಚೀನ ವಿಗ್ರಹ, ಪ್ರಭಾವಳಿ ಮತ್ತು ಆಭರಣ ದೋಚಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 10 ಲಕ್ಷದ ಅಧಿಕ ಮೌಲ್ಯದ ಸೊತ್ತು ಕಳವಾಗಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರ ಭೇಟಿ
ಪರಿಶೀಲಿಸಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News