ತ್ರಿಗಳಿ ತಲಾಖ್ ಸಂಭ್ರಮಕ್ಕೆ ಆಕ್ರೋಶ

Update: 2017-09-01 06:20 GMT

ಮಂಗಳೂರು, ಸೆ.1: ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕುರಿತಂತೆ ಕೆಲವರ ಹೇಳಿಕೆ, ಸಂಭ್ರಮಾಚರಣೆಗಳಿಗೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್ ತೀರ್ಪು ನಿರೀಕ್ಷಿತ. ಏಕಕಾಲದಲ್ಲಿ ತ್ರಿವಳಿ‌ ತಲಾಖ್ ಇಸ್ಲಾಮಿನಲ್ಲಿಲ್ಲ. ಇಲ್ಲದುದನ್ನು ಇದ್ದಂತೆ ವಿಜೃಂಭಿಸಿ, ಪೂರಕ ತೀರ್ಪು ಬಂದಾಗ ಸಂಭ್ರಮಿಸುವುದು ರಾಜಕೀಯ ದುರುದ್ದೇಶ ಬಿಟ್ಟರೆ ಬೇರೇನೂ ಅಲ್ಲ. ಇಡೀ ಮುಸ್ಲಿಂ ಸಮಾಜಕ್ಕೆ ತಲಾಖ್ ಕೊಡುವುದು ಬಿಟ್ಟರೆ ಬೇರೇನೂ ಕೆಲಸವೇ ಇಲ್ಲ ಎಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ಪ್ರಧಾನಿಯಂತೂ ಮುಸ್ಲಿಂ ಮಹಿಳೆಯರಿಗೆ ಹಕ್ಕು ಸಿಕ್ಕಿದೆ ಎಂದು ಬೀಗುತ್ತಿದ್ದಾರೆ ಎಂದು ಬಕ್ರೀದ್ ಸಂದೇಶದ ಬಳಿಕ ಅವರು ಹೇಳಿದರು.

ವೈವಾಹಿಕ ಜೀವನ ಅಸಾಧ್ಯ ಎಂದಾದಾಗ ಸಾಯುವ ತನಕ ಕೊರಗುವುದನ್ನು ಬಿಟ್ಟು, ವಿಚ್ಛೇದನ ಪಡೆದು‌ ಸ್ವತಂತ್ರವಾಗಿ ಬದುಕುವುದು ನಿಜವಾದ ಸ್ವಾತಂತ್ರ್ಯ. ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ಇಸ್ಲಾಮ್ ಇದನ್ನು ಎಂದೋ ಹೇಳಿದೆ. ಯಾರಾದರೂ ತಲಾಖ್ ನಿಯಮ ಮೀರಿದರೆ ಭಾರತೀಯ ಕಾನೂನು ಶಿಕ್ಷಿಸುವುದರ ಜತೆಗೆ, ಅಲ್ಲಾಹನೂ ಶಿಕ್ಷಿಸುತ್ತಾನೆ. ಹೀಗಿರುವಾಗ ಯಾರನ್ನೋ ಮೆಚ್ಚಿಸಲು ಶರೀಅತ್ ಕಾನೂನಿಗೆ ಶರತ್ತುಗಳನ್ನು ವಿಧಿಸಿ ಕಾನೂನು ರಚಿಸುತ್ತೇವೆ ಎನ್ನುವುದನ್ನು ಒಪ್ಪಲಾಗದು ಎಂದು ಖಾಝಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News