ಎಸ್.ಸಂಶುದ್ದೀನ್‌ಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್‌ನಿಂದ ಸನ್ಮಾನ
ಸುಳ್ಯ, ಸೆ.1: ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದ ಮಾಜಿ ನಪಂ ಅಧ್ಯಕ್ಷ ಎಸ್.ಸಂಶುದ್ದೀನ್‌ಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಮುಸ್ತಫಾ ಕೆ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಂಸುದ್ದೀನ್ ಅವರನ್ನು ರೋಟರಿ ನಿಕಟ ಪೂರ್ವಾಧ್ಯಕ್ಷ ಅಬ್ದುಲ್ ಹಮೀದ್ ಜನತಾ ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುಳ್ಯ ತಾಲೂಕಿಗೆ ವಖ್ಫ್ ಕೌನ್ಸಿಲ್‌ನಿಂದ ಎಲ್ಲಾ ರೀತಿಯ ಅನುದಾನಗಳನ್ನು ದೊರಕುವಂತೆ ಶ್ರಮ ವಹಿಸುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಮಜೀದ್ ಜನತಾ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಇಬ್ರಾಹೀಂ, ಸುಳ್ಯ ರೋಟರಿ ಟ್ರಸ್ಟಿ ಖಾಲಿದ್ ಟಿ.ಎಂ., ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾರ್ ಕಟ್ಟೆಕ್ಕಾರ್, ಸಪ್ನಾ ಬಶೀರ್, ಅಬ್ದುಲ್ ಖಾದರ್, ಇರ್ಫಾನ್ ಜನತಾ, ಜೈಭಾರತ್ ಯುವಕ ಮಂಡಲ ಕಾರ್ಯದರ್ಶಿ ಶಹೀದ್ ಪಾರೆ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರಫೀಕ್ ಚೆಂಗಳ, ಶಯಿಮು, ಜಿಫ್ರಿ ಮತ್ತಿತರರು ಉಪಸ್ಥಿತರಿದ್ದರು.