×
Ad

ಸೆ.2, 3ರಂದು ಸ್ತ್ರೀರೋಗ ತಜ್ಞರ ರಾಜ್ಯ ಸಮ್ಮೇಳನ

Update: 2017-09-01 19:33 IST

ಮಂಗಳೂರು, ಸೆ.1: ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘದ ಆಶ್ರಯದಲ್ಲಿ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ ಸಂಘದ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಕಾರ್ಯಾಗಾರ ಸೆ.2 ಮತ್ತು 3 ರಂದು ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಘಟಕಿ ಡಾ.ಅಮೃತ ಭಂಡಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ. 2 ರಂದು ದೈನಂದಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪ್ರಸೂತಿ ಶಾಸ್ತ್ರದಲ್ಲಿ ನಿರ್ಣಾಯಕ ಆರೈಕೆ ಹಾಗೂ ಸಂಶೋಧನಾ ವಿಧಾನಗಳು ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ. ಆಸಕ್ತ ವೈದ್ಯರ ಜ್ಞಾನ ಮತ್ತು ಕೌಶಲ ನವೀಕರಿಸಿಕೊಳ್ಳಲು ಈ ಕಾರ್ಯಾಗಾರ ನೆರವಾಗಲಿದೆ ಎಂದವರು ಹೇಳಿದರು.
ಸಂಘಟನಾ ಅಧ್ಯಕ್ಷೆ ಡಾ.ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿ ಡಾ.ವತ್ಸಲಾ ಕಾಮತ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News