×
Ad

ರೇಡಿಯೊ ಮೂಲಕ ಸಾಮಾಜಿಕ ಜಾಗೃತಿ: ಕಿರಣ್ ಶಣೈ

Update: 2017-09-02 19:18 IST

ಮೂಡುಬಿದಿರೆ, ಸೆ.2: ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮದ ಅಬ್ಬರದ ಮುಂದೆ ರೇಡಿಯೊ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ, ಇನ್ನು ಎತ್ತರಕ್ಕೆ ಬೆಳೆದು ತನ್ನದೇ ಛಾಪನ್ನು ಮೂಡಿಸುತ್ತಿದೆ. ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ರೇಡಿಯೊ ಪ್ರಮುಖ ಪಾತ್ರವನ್ನುವಹಿಸಿದೆ ಎಂದು Olpa.in  ಸಂಸ್ಥಾಪಕ ಕಿರಣ್ ಶಣೈ ಹೇಳಿದರು.

ಅವರು ಆಳ್ವಾಸ್ ಪದವಿಯ ಪತ್ರಿಕೋದ್ಯಮ ವಿಭಾಗವು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ರೇಡಿಯೊ ಅಂದು, ಇಂದು, ಮುಂದು ಮತ್ತು ಉದ್ಯೋಗವಕಾಶಗಳು’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ರೇಡಿಯೊ ಒಂದು ವೈಯುಕ್ತಿಕ ಸಾಮಾನ್ಯ ಹಾಗೂ ಸಂವಹನ ಮಾಧ್ಯಮವಾಗಿ, ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಅಲ್ಲದೆ ಆಕಾಶವಾಣಿ ವಿಭಾಗದಲ್ಲಿರುವ ವಿಫುಲ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ರೇಡಿಯೊದಲ್ಲಿ ಹಾಡುಗಳನ್ನು ಕೇಳುವುದನ್ನು ನಾವು ಬಹುಪಾಲು ಪ್ರೀತಿಸುತ್ತೇವೆ, ಪ್ರಯಾಣ , ಕೆಲಸ ಅಥವಾ ಇತರ ಚಟುವಟಿಕೆಗಳ ಸಮಯದಲ್ಲಿ ರೇಡಿಯೊದಲ್ಲಿ ಪ್ರಸಾರವಾಗುವ ವಿವಿಧ ಪ್ರಕಾರಗಳ ಕಾರ್ಯಕ್ರಮಗಳನ್ನು ಕೇಳುತ್ತೇವೆ. ಆದರೆ ಇಂತಹ ಉದ್ಯೋಗಗಳಿಗೆ ಪೋಷಕರ ಪ್ರೋತ್ಸಾಹ ಕಡಿಮೆಯಾಗಿದೆ ಏಕೆಂದರೆ ಅವರು ಇದನ್ನು ಪ್ರೊಫೆಶನಲ್ ವೃತ್ತಿಯೆಂದು ಪರಿಗಣಿಸುವುದಿಲ್ಲ. ರೇಡಿಯೊ ಉದ್ಯಮದ ಬಗ್ಗೆ ಇರುವ ಈ ಎಲ್ಲಾ ತಪ್ಪು ಕಲ್ಪನೆಗಳು ಅದರ ಪ್ರಗತಿಗೆ ಅಡ್ಡಿಪಡಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆಳ್ವಾಸ್ ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ, ಉಪನ್ಯಾಸಕಿ ಸ್ವಾತಿ ಹಾಗೂ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿಧಿ ಕಾರ್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News