×
Ad

ಉಡುಪಿ: ಶ್ರೀಕೃಷ್ಣಾಷ್ಟಮಿ ಸ್ಪರ್ಧೆ ಉದ್ಘಾಟನೆ

Update: 2017-09-02 21:10 IST

ಉಡುಪಿ, ಸೆ.2: ಪರ್ಯಾಯ ಪೇಜಾವರ ಅಧೋಕ್ಷಜ ಮಠದ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ.13 ಮತ್ತು 14ರಂದು ನಡೆಯುವ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ನಡೆಯುವ ವಿವಿಧ ಸ್ಪರ್ಧೆಗಳನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ನೆರವೇರಿಸಿದರು.

ಪ್ರತಿಯೊಂದು ಯುಗದಲ್ಲೂ ಭಗವಂತ ಅವತಾರ ಮಾಡಿದ್ದಾನೆ. ಆದರೆ ಕೃಷ್ಣಾವತಾರ ನಮ್ಮ ಸಮೀಪದ ಅವತಾರವಾದುದರಿಂದ ನಾವು ವಿಜೃಂಭಣೆ ಯಿಂದ ಆಚರಿಸುತ್ತೇವೆ. ಕೃಷ್ಣನ ಅದ್ಭುತ ಹಾಗೂ ಅನಂತವಾದ ಬಾಲಲೀಲೆ ಗಳನ್ನು ನಮ್ಮ ಮಕ್ಕಳಲ್ಲಿ ನಾವು ಕಾಣುತ್ತೇವೆ. ಮಕ್ಕಳಲ್ಲಿರುವ ಇಂತಹ ಕಲೆಗಳನ್ನು ಪ್ರದರ್ಶಿಸಿ ಚಿಣ್ಣರಲ್ಲಿರುವ ಕೃಷ್ಣನನ್ನು ಕಂಡು ಸಂತೋಷ ಡುತ್ತೇವೆ ಎಂದವರು ನುಡಿದರು.

ಪ್ರತಿಯೊಂದು ಯುಗದಲ್ಲೂ ಭಗವಂತ ಅವತಾರ ಮಾಡಿದ್ದಾನೆ.ಆದರೆ ಕೃಷ್ಣಾವತಾರ ನಮ್ಮ ಸಮೀಪದ ಅವತಾರ ವಾದುದರಿಂದ ನಾವು ವಿಜೃಂಣೆ ಯಿಂದ ಆಚರಿಸುತ್ತೇವೆ. ಕೃಷ್ಣನ ಅದ್ಭುತ ಹಾಗೂ ಅನಂತವಾದ ಬಾಲಲೀಲೆ ಗಳನ್ನು ನಮ್ಮ ಮಕ್ಕಳಲ್ಲಿ ನಾವು ಕಾಣುತ್ತೇವೆ. ಮಕ್ಕಳಲ್ಲಿರುವ ಇಂತಹ ಕಲೆಗಳನ್ನು ಪ್ರದರ್ಶಿಸಿ ಚಿಣ್ಣರಲ್ಲಿರುವ ಕೃಷ್ಣನನ್ನು ಕಂಡು ಸಂತೋಷ ಪಡುತ್ತೇವೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಸಂಗೀತ ಸ್ಪರ್ಧೆಯ ತೀರ್ಪುಗಾರರಾದ ಚಂದ್ರಶೇಖರ ಕೆದ್ಲಾಯ, ಡಾ.ರವೀಂದ್ರನಾಥ್ ರಾವ್, ನರಸಿಂಹ ಹೆಬ್ಬಾರ್ ಹಾಗೂ ಪರ್ಯಾಯ ಮಠದ ಕಾರ್ಯಕ್ರಮ ಸಂಚಾಲಕ ಪ್ರೊ.ಎಂ.ಎಲ್.ಸಾಮಗ ಉಪಸ್ಥಿತರಿದ್ದು.

ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News