ಸಿಂಡ್ ಬ್ಯಾಂಕ್ ಅಧ್ಯಕ್ಷರಾಗಿ ಅಜಯ್ ವಿಪಿನ್ ನಾನಾವತಿ
Update: 2017-09-02 21:13 IST
ಉಡುಪಿ, ಸೆ.2: ಸಿಂಡಿಕೇಟ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅಜಯ್ ವಿಪಿನ್ ನಾನಾವತಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಅಮೆರಿಕದ ವರ್ಜೀನಿಯಾ ತಾಂತ್ರಿಕ ವಿವಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ನಾನಾವತಿ ಅವರು 1988ರಲ್ಲಿ ಭಾರತದಲ್ಲಿ 3ಎಂ ಕಂಪೆನಿ ಸೇರುವುದರೊಂದಿಗೆ ತನ್ನ ವೃತ್ತಿಜೀವನ ಆರಂಭಿಸಿದರು. ತನ್ನ ವೃತ್ತಿ ಬದುಕಿನ ಮೂರು ದಶಕಗಳಲ್ಲಿ ಬಹುಭಾಗವನ್ನು ಅಮೆರಿಕ, ಸಿಂಗಾಪುರ, ಆಸ್ಟ್ರಿಯ ಹಾಗೂ ಇಸ್ರೇಲ್‌ಗಳಲ್ಲಿ ಕಳೆದರು.