ಉಡುಪಿ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ 10 ಮಂದಿ ಆಯ್ಕೆ
ಉಡುಪಿ, ಸೆ.2: ಉಡುಪಿ ಜಿಲ್ಲಾ ಮಟ್ಟದ ಪ್ರಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಒಟ್ಟು 10 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಶಿಕ್ಷಕರ ವಿವರ ಹೀಗಿದೆ
ಪ್ರೌಢ ಶಾಲಾ ವಿಭಾಗ: ಪ್ರಭಾಕರ ಶೆಟ್ಟಿ, ಸಹ ಶಿಕ್ಷಕರು ವಿದ್ಯಾವರ್ಧಕ ಪ.ಪೂ.ಕಾಲೇಜು ಮುಂಡ್ಕೂರು (ಕಾರ್ಕಳ ವಲಯ), ಸುಬ್ಬಣ್ಣ ಕೋಣಿ, ಸಹ ಶಿಕ್ಷಕರು, ನಿವೇದಿತಾ ಪ್ರೌಢ ಶಾಲೆ ಬಸ್ರೂರು (ಕುಂದಾಪುರ ವಲಯ), ಕೆ.ಸದಾನಂದ ಶೆಟ್ಟಿ, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಆಲೂರು (ಬೈಂದೂರು ವಲಯ), ಸೋಮಪ್ಪ ತಿಂಗಳಾಯ, ದೈಹಿಕ ಶಿಕ್ಷಕರು, ಸರಕಾರಿ ಸಂಯುಕ್ತ ಪ್ರೌಢ ಶಾಲೆ ಅಜ್ಜರಕಾಡು(ಉಡುಪಿ ವಲಯ), ಗಣೇಶ್ ಜಿ., ಮುಖ್ಯ ಶಿಕ್ಷಕರು, ಚೇತನಾ ಪ್ರೌಢ ಶಾಲೆ ಹಂಗಾರಕಟ್ಟೆ (ಬ್ರಹ್ಮಾವರ ವಲಯ).
ಪ್ರಾಥಮಿಕ ಶಾಲಾ ವಿಭಾಗ: ಶಂಕರ ಶೆಟ್ಟಿ ಎ., ಮುಖ್ಯ ಶಿಕ್ಷಕರು, ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ (ಉಡುಪಿ ವಲಯ), ಭಾರತಿ, ಪದವಿಧರೇತರ ಮುಖ್ಯ ಶಿಕ್ಷಕರು, ಆನೆಗುಡ್ಡೆ ಶ್ರೀವಿನಾಯಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂಭಾಶಿ (ಕುಂದಾಪುರ ವಲಯ), ಜಿ.ಹನುಮಂತ, ಸಹಶಿಕ್ಷಕರು, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕಶಾಲೆ ಮಯ್ಯಾಡಿ (ಬೈಂದೂರು ವಲಯ), ಸಂಜೀವ ದೇವಾಡಿಗ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕಶಾಲೆ ಬಂಗ್ಲೆಗುಡ್ಡೆ ಕಾರ್ಕಳ (ಕಾರ್ಕಳ ವಲಯ), ಸಬಿತಾ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಳಾರ್ಕಳಬೆಟ್ಟು ಬ್ರಹ್ಮಾವರ (ಬ್ರಹ್ಮಾವರ ವಲಯ).