ಶೇಡಿಗುರಿ: 1.5 ಲಕ್ಷ ರೂ. ವೆಚ್ಚದ ಹೈಮಾಸ್ಟ್ ದೀಪ ಉದ್ಘಾಟನೆ
ಬಂಟ್ವಾಳ, ಸೆ. 2: ತಾಲ್ಲೂಕಿನ ನರಿಕೊಂಬು ಗ್ರಾಮ ಪಂ. ವ್ಯಾಪ್ತಿಯ ಶೇಡಿಗುರಿ ಎಂಬಲ್ಲಿ 1.5 ಲಕ್ಷ ರೂ . ವೆಚ್ಚದಲ್ಲಿ ಅಳವಡಿಸಲಾದ ’ಹೈಮಾಸ್ಟ್’ ದೀಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಸಂಜೆ ಉದ್ಘಾಟಿಸಿದರು.
ಈಗಾಗಲೇ ಇಲ್ಲಿನ ಪಾಣೆಮಂಗಳೂರು, ಮೊಗರ್ನಾಡು ಮತ್ತಿತರ ಕಡೆಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದ್ದು, ಬೋಳಂತೂರು- ನಾಟಿ ಸಂಪರ್ಕ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಶೇಡಿಗುರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಕೂಡಾ ಜನತೆಗೆ ಇಂತಹ ಮೂಲಭೂತ ಸೌಕರ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಹೈಮಾಸ್ಟ್ ದೀಪ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು.
ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ತಾಲ್ಲೂಕು ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಮಾಜಿ ಸದಸ್ಯ ಆಲ್ಫೋನ್ಸ್ ಮಿನೇಜಸ್, ಪ್ರಮುಖರಾದ ಆಲ್ಬರ್ಟ್ ಮಿನೇಜಸ್, ಆನಂದ ಸಾಲ್ಯಾನ್, ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಕೃಷ್ಣಪ್ಪ ಪೂಜಾರಿ ನಾಟಿ, ಗೋವಿಂದ ಏಲಬೆ, ಭರತ್‌ರಾಜ್, ಸತೀಶ ಶೇಡಿಗುರಿ, ಚಂದ್ರ ಪೂಜಾರಿ ಮತ್ತಿತರರು ಇದ್ದರು.