ರಸ್ತೆ ಅಪಘಾತ: ಮಹಿಳೆ ಮೃತ್ಯು
Update: 2017-09-02 23:40 IST
ಬಂಟ್ವಾಳ, ಸೆ. 2: ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಲ ಎಂಬಲ್ಲಿ ಎರಡು ದ್ವಿಚಕ್ರವಾಹನಗಳ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ತೆಂಕ ಕಜೆಕಾರು ನಿವಾಸಿ ಮುಹಮ್ಮದ್ ಎಂಬವರ ಪತ್ನಿ ಮೈಮುನಾ (40) ಎಂದು ಗುರುತಿಸಲಾಗಿದೆ.
ಬೈಕ್ ಹಾಗೂ ಆಕ್ಟಿವಾ ನಡುವೆ ಈ ಅಪಘಾತ ನಡೆದಿದ್ದು, ಬೈಕ್ ಢಿಕ್ಕಿ ಹೊಡೆದ ಪರಿಣಾಮ ತನ್ನ ಪುತ್ರನೊಂದಿಗೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದ ಮೈಮುನಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಆ್ಯಕ್ಟಿವಾ ಚಲಾಯಿಸುತ್ತಿದ್ದ ಮೈಮುನಾರ ಮಗ ಇರ್ಫಾನ್ ಹಾಗೂ ಬೈಕ್ ಸವಾರ ತಣ್ಣೀರು ಪಂಥ ನಿವಾಸಿ ರವಿ ಎಂಬವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.