ಮಾದಕ ವಸ್ತು ಸೇವನೆ: ಪ್ರಕರಣ ದಾಖಲು
Update: 2017-09-02 23:46 IST
ಉಡುಪಿ, ಸೆ.2: ಮಾದಕ ದ್ರವ್ಯ, ಗಾಂಜಾ ವಸ್ತು ಸೇವನೆಗೆ ಸಂಬಂಧಿಸಿ 18ರ ಹರೆಯದ ಯುವಕರ ಮೇಲೆ ಮಣಿಪಾಲ ಪೊಲೀಸರು ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಳ್ಳಿ ಗ್ರಾಮದ ಸನ್‌ಸೆಟ್‌ಪಾಯಿಂಟ್ ಬಳಿ ಗಾಂಜಾ ಸೇವಿಸುತ್ತಿದ್ದ ಮೊಹೈಮಿನ್ (18), ಸುಹೇಲ್ (18), ಶಮೀನ್ (18) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.