×
Ad

ಮಟ್ಕಾ: ಇಬ್ಬರ ಬಂಧನ

Update: 2017-09-02 23:47 IST

ಉಡುಪಿ, ಸೆ.2: ಸಾರ್ವಜನಿಕ ಸ್ಥಳದಲ್ಲಿ ಜನ ಸೇರಿಸಿ ಹಣ ಪಣಕ್ಕಿಟ್ಟು ಮಟ್ಕಾ, ಜುಗಾರಿ ದಂಧೆ ನಡೆಸುತ್ತಿದ್ದ 2 ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ದಂಧೆ ನಡೆಸುತ್ತಿದ್ದ ಬಲಾಯಿಪಾದೆ ನಿವಾಸಿ ಕರಿಯಪ್ಪ (35) ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕ ಕೋಟ್ನಕಟ್ಟೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಪುತ್ತಿಗೆ ಮದಗ ಬೊಮ್ಮರಬೆಟ್ಟು ನಿವಾಸಿ ಸುಧೀರ್ ಸೇರಿಗಾರ್ (29) ಎಂಬಾತನನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗಳಿಂದ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News