ಮೊಗ್ರಾಲ್: ಸಮುದ್ರಕ್ಕೆ ಇಳಿದ ಯುವಕ ನಾಪತ್ತೆ
Update: 2017-09-03 15:36 IST
ಕಾಸರಗೋಡು, ಸೆ. 3: ಬಾಲ್ ಹೆಕ್ಕಲು ಸಮುದ್ರಕ್ಕಿಳಿದ ಯುವಕ ನೀರುಪಾಲಾದ ಘಟನೆ ಮೊಗ್ರಾಲ್ ನಲ್ಲಿ ನಡೆದಿದೆ. ಮೊಗ್ರಾಲ್ ಕೊಪ್ಪಳದ ಖಲೀಲ್ (20) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.
ಸ್ನೇಹಿತರ ಜೊತೆ ಕಡಲ ಕಿನಾರೆಯಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡು ಸಮುದ್ರಕ್ಕೆ ಬಿದ್ದಿದ್ದು, ಅದನ್ನು ಹಿಡಿಯಲು ಹಿಂದೆಯೇ ಓದಿದ ಖಲೀಲ್ ನೀರುಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಖಲೀಲ್ ನೀರುಪಾಲಾಗಿ, ನಾಪತ್ತೆಯಾಗಿದ್ದು ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ಎರ್ನಾಕುಲಂ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಖಲೀಲ್ ಬಕ್ರೀದ್ ಗಾಗಿ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.