×
Ad

ಜಾತಿ ಧರ್ಮಗಳ ಹೆಸರಲ್ಲಿ ಹಿಂಸೆ ಸಲ್ಲದು: ರಾಜ್ಯಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್

Update: 2017-09-03 19:07 IST

ಬೆಳ್ತಂಗಡಿ, ಸೆ.3: ಜಾತಿ ಧರ್ಮಗಳ ಹೆಸರಲ್ಲಿ ಹಿಂಸೆ ಸಲ್ಲದು. ದಯೆಯೇ ಎಲ್ಲ ಧರ್ಮಗಳ ಮೂಲವಾಗಿದ್ದು ಅದನ್ನು ತಿಳಿದು ಧರ್ಮವನ್ನು ಪಾಲಿಸಬೇಕಾ ಗಿದೆ. ಶೋಷಿತರ, ದುರ್ಬಲ ವರ್ಗದವರ, ಬಡವರ ಒಳಿತಿಗಾಗಿ ಶ್ರಮಿಸುವ ಅಗತ್ಯವಿದೆ. ಧರ್ಮದ ಮೇಲೆ ಅಭಿಮಾನವಾಗಬೇಕೆ ಹೊರತು ದುರಾಭಿ ಮಾನಬೆಳೆಸಿಕೊಳ್ಳುವುದು ಸರಿಯಲ್ಲ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿರು.

ಅವರು ರವಿವಾರ ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಕ್ಷೇತ್ರದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಎಲ್ಲರೂ ಅಕ್ಷರಸ್ಥರಾಗಿದ್ದಾರೆ. ಆದರೆ ವಿದ್ಯಾವಂತರಾಗಿಲ್ಲ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹಿಂದುಳಿದ ವರ್ಗದವರು ಹಾಗೂ ಶೋಷಿತ ಸಮುದಾಯಗಳ ಯುವಕರನ್ನು ದಾರಿ ತಪ್ಪಿಸಿ  ಶೋಷಣೆ ಮಾಡುತ್ತಾರೆ. ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿದಾಗ ಶೋಷಣೆ ಮುಕ್ತ ಸಮಾಜ ರೂಪಿಸಲು ಸಾಧ್ಯವಾಗುತ್ತದೆ. ಕ್ಷೇತ್ರದ ಮೂಲಕ ಬ್ರಹ್ಮಾನಂದ ಶ್ರೀಗಳು ದ.ಕ. ಉಡುಪಿ ಜಿಲ್ಲೆಯಲ್ಲಿ ಶ್ರೀಮಂತರನ್ನು ಒಗ್ಗೂಡಿಸಿಕೊಂಡು ಬಡಕುಟುಂಬಗಳ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು. ಈ ದಿಸೆಯಲ್ಲಿ ಸ್ವಾಮೀಜಿಯವರಿಗೆ ಸಹಾರ ನೀಡುವುದಾಗಿ ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸರ್ವೇ ಜನಃ ಸುಖಿನೋ ಭವಂತು ಎಂಬುದು ಭಾಷಣಕ್ಕೆ ಸೀಮಿತವಾಗದೆ ಆಚರಣೆಗೆ ಬರಬೇಕು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದನ್ನು ಅನುಷ್ಠಾನಗೊಳಿಸುವುದು ಸುಲಭದ ಮಾತಲ್ಲ. ಶ್ರೀಗಳು ನಾರಾಯಣಗುರುಗಳ ತತ್ವವನ್ನು ಪಾಲಿಸುವುದರ ಜೊತೆಗೆ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಶ್ಲಾಘನೀಯಶ್ರೀ ನಾರಾಯಣ ಗುರುಗಳ ಸಹೋದರತೆಯ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದರು.

ಕ್ಷೇತ್ರ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವದಿಸಿ, ಧರ್ಮದ ಮರ್ಮವನ್ನರಿತುಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ದಯೆಯೇ ಸಕಲ ಧರ್ಮಗಳ ಸಾರವಾಗಿದ್ದುಎಲ್ಲರಿಗೂ ಹಿತವಾಗಲಿ ಎಂದು ನಿತ್ಯವೂ ಕೆಲಸ ಮಾಡಿಧರ್ಮದ ಪರಿಕಲ್ಪನೆಯಲ್ಲಿ ಸಾರ್ಥಕಜೀವನ ನಡೆಸಬೇಕು. ಮಾನವಜನ್ಮ ಶ್ರೇಷ್ಠವಾಗಿದ್ದುಧರ್ಮದ ಮೂಲಕ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಸುಖ-ಶಾಂತಿ, ನೆಮ್ಮದಿಯಜೀವನ ನಡೆಸಬೇಕು ಎಂದರು.

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಜನಪದ ವಿದ್ವಾಂಂಸ ಬಾಬು ಅಮೀನ್, ಧರ್ಮಸ್ಥಳದ ಉಗ್ರಾಣದ ಹಿರಿಯ ಮುಸ್ಸದ್ದಿ ಭುಜಬಲಿ, ಭಟ್ಕಳದ ಮಾಜಿ ಶಾಸಕ ಜೆ. ಡಿ.ನಾಯ್ಕ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೆ. ತೇಜೋಮಯ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್ ಉಡುಪಿ, ರುಕ್ಮಯ ಪೂಜಾರಿ ವಿಟ್ಲ, ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಬೆಳ್ತಂಗಡಿ ಗು. ಸ್ವಾ. ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೊಳ್ಪಡಿತ್ತಾಯ, ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಕ್ಷೇತ್ರದ ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ಚಿತ್ತರಂಜನ್ ಗರೋಡಿ, ಜೆ. ಎನ್. ನಾಯ್ಕೋ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಟ್ರಸ್ಟಿ ತುಕರಾಮ ಸಾಲಿಯಾನ್ ಸ್ವಾಗತಿಸಿ, ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಸ್ತಾಪಿಸಿದರು. ಆರ್. ಜಿ. ನಾಯ್ಕಾ ವಂದಿಸಿ, ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News