‘ಎಮ್ಮೆಕರೆ ಮೈದಾನ’ ಉಳಿಸಲು ಆಗ್ರಹಿಸಿ ಧರಣಿ
ಮಂಗಳೂರು, ಸೆ.3: ಎಮ್ಮೆಕರೆ ಮೈದಾನ ಉಳಿಸಿ ಹೋರಾಟ ಸಮಿತಿ ವತಿಯಿಂದ ರವಿವಾರ ಎಮ್ಮೆಕೆರೆ ಮೈದಾನದಲ್ಲಿ ‘ಎಮ್ಮೆಕೆರೆ ಮೈದಾನ’ ಉಳಿಸಲು ಆಗ್ರಹಿಸಿ ಧರಣಿ ನಡೆಸಿತಲ್ಲದೆ ಎಮ್ಮೆಕೆರೆ ಮೈದಾನದಲ್ಲಿ ಈಜುಕೊಳ ನಿರ್ಮಿಸಲು ಹೊರಟಿರುವ ಕ್ರಮವನ್ನು ಹೋರಾಟ ಸಮಿತಿ ಖಂಡಿಸಿತು.
ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಕವಿತಾ ವಾಸು, ದಿವಾಕರ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಹೋರಾಟ ಸಮಿತಿಯ ಮುಖಂಡ ರಾದ ದಿನಕರ ಶೆಟ್ಟಿ, ಯೋಗಿಶ್ ಶೆಟ್ಟಿ ಜೆಪ್ಪು, ಗಣೇಶ್ ಕುಮಾರ್, ಎಮ್ಮೆಕೆರೆ ಸಲಾಂ,ಜ್ಯೋತಿಕಾ ಜೈನ್, ಹುಸೇನ್, ಗಿರಿಶ್, ಅವಿನಾಶ್ ಅಂಚನ್, ಪ್ರದೀಪ್,ಸಿರಾಜ್, ಪ್ರಶಾಂತ್ ಕಡಬ ಮತ್ತಿತರರು ಪಾಲ್ಗೊಂಡಿದ್ದರು.
ಮನವಿ ಸ್ವೀಕಾರ: ಧರಣಿ ಸ್ಥಳಕ್ಕೆ ಶಾಸಕ ಜೆ.ಆರ್.ಲೋಬೊ ಭೇಟಿ ನೀಡಿದರು. ಈ ಸಂದರ್ಭ ಹೋರಾಟ ಸಮಿತಿಯ ಪದಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕರು ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಲ್ಲಿಸಲು ಸೂಚಿಸಿದರು.