ಸೆ.5: ‘ಇರುವುದೊಂದೆ ಭೂಮಿ’ ಕಿರುಚಿತ್ರ ಬಿಡುಗಡೆ
Update: 2017-09-03 19:39 IST
ಮಂಗಳೂರು, ಸೆ.3: ಸ್ವಚ್ಛತಾ ನೀತಿ 2017ರಂತೆ ಜಿಲ್ಲಾದ್ಯಂತ ಈ ವರ್ಷ ಜನ ಸಾಮಾನ್ಯರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಸಲುವಾಗಿ ರಚಿಸಲಾದ ‘ಇರುವುದೊಂದೆ ಭೂಮಿ’ ಕಿರು ಚಿತ್ರವನ್ನು ಸೆ.5ರಂದು ನಗರದ ಪುರಭವನದಲ್ಲಿ ನಡೆಯುವ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‌ಜನ್ಮ ದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಅಧ್ಯಕ್ಷರು ಮತ್ತಿತರರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿ ಸ್ವಚ್ಚತಾ ವರ್ಷಾಚರಣೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ದ.ಕ.ಜಿಪಂ ಸಿಇಒ ಪ್ರಕಟನೆ ತಿಳಿಸಿದೆ.