ಎನ್ ಡಿಎ ಸರಕಾರ ‘ಬಹುತೇಕ ಸತ್ತಿದೆ’: ಶಿವಸೇನೆ ಸಂಸದ
Update: 2017-09-03 19:47 IST
ಹೊಸದಿಲ್ಲಿ, ಸೆ.3: ಇತ್ತ ಕೇಂದ್ರ ಸಚಿವ ಸಂಪುಟ ಪುನಾರಚನೆ ನಡೆಯುತ್ತಿದ್ದರೆ ಅತ್ತ ಶಿವಸೇನೆ ಸಮಾರಂಭವನ್ನು ಬಹಿಷ್ಕರಿಸಿತ್ತು. ಶಿವಸೇನೆಯ ಯಾವೊಬ್ಬ ನಾಯಕನಿಗೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದೇ ಪಕ್ಷದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಎನ್ ಡಿಎ ಸರಕಾರ ‘ಬಹುತೇಕ ಸತ್ತಿದೆ’ ಎಂದಿದ್ದಾರೆ.
“ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಕೇವಲ ಪತ್ರಗಳಲ್ಲಿ ಮಾತ್ರ ಜೀವಂತವಿದೆ. ಸಂಸತ್ ಅಥವಾ ರಾಷ್ಟ್ರಪತಿ ಚುನಾವಣೆಯಂತಹ ಸಂದರ್ಭಗಳಲ್ಲಿ ಸಹಾಯ ಬೇಕಾದಾಗ ಮಾತ್ರ ನಮ್ಮ ನೆನಪಾಗುತ್ತದೆ. ಎನ್ ಡಿಎ ಸರಕಾರ ಬಹುತೇಕ ಸತ್ತುಹೋಗಿದೆ” ಎಂದಿದ್ದಾರೆ,
“ನಾವು ಅಧಿಕಾರ ದಾಹಿಗಳಲ್ಲ. ರಾಜಕೀಯ ಕಾರಣಗಳಿಗಾಗಿ ಸಂಪುಟ ಪುನಾರಚನೆ ಮಹತ್ವವಾಗಿದ್ದು, ಸೂಕ್ತ ಸಂದರ್ಭಗಳಲ್ಲಿ ನಾವು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ” ಎಂದವರು ಹೇಳಿದ್ದಾರೆ,