×
Ad

​ಸೆ.17: ಜಿಲ್ಲಾ ಮಟ್ಟದ ಹಿರಿಯರ, ತಾಲೂಕು ಮಟ್ಟದ ಕಿರಿಯರ ಕ್ರೀಡಾಕೂಟ

Update: 2017-09-03 19:51 IST

ಮಂಗಳೂರು, ಸೆ. 3: ಮಂಗಳೂರು ಮಾಸ್ಟರ್ಸ್‌ ಅಥ್ಲೆಟಿಕ್ ಅಸೋಸಿಯೇನ್ ಆಶ್ರಯದಲ್ಲಿ ದಿ. ಶ್ರೀಧರ ರೈ ಸ್ಮರಣಾರ್ಥ ದ.ಕ. ಜಿಲ್ಲಾ ಮಟ್ಟದ 14ನೆ ಹಿರಿಯರ ಹಾಗೂ ಮಂಗಳೂರು ತಾಲೂಕು ಮಟ್ಟದ ಕಿರಿಯರ ಕ್ರೀಡಾಕೂಟ ಸೆ. 17ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕ್ರೀಡಾಕೂಟದಲ್ಲಿ ಹಿರಿಯರು, ಮಹಿಳೆಯರು, ಬಾಲಕ, ಬಾಲಕಿಯರು ಸೇರಿದಂತೆ 400ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪುರುಷರಿಗೆ 35-75 ವರ್ಷ ಹಾಗೂ ಮಹಿಳೆಯರಿಗೆ 35-70 ವರ್ಷದೊಳಗೆ ವಿವಿಧ ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ.

ಪುರುಷರಿಗೆ 100, 200, 400, 800, 1500, 5000 ಮೀಟರುಗಳ ಓಟಗಳು ಹಾಗೂ 5000 ಮೀ. ನಡೆ ಮತ್ತು ಹೈ ಜಂಪ್, ಟ್ರಿಪ್ಲ್ ಜಂಪ್, ಲಾಂಗ್ ಜಂಪ್, ಶಾಟ್‌ಪುಟ್, ಡಿಸ್ಕಸ್ ಎಸೆತ, ಹಾಮ್ಮರ್ ಎಸೆತ, ಜವೆಲಿನ್ ಎಸೆತ ಇತ್ಯಾದಿ,

ಮಹಿಳೆಯರಿಗೆ 100, 200, 400, 800, 1500, 5000 ಮೀಟರುಗಳ ಓಟಗಳು ಹಾಗೂ 5000 ಮೀ. ನಡೆ ಮತ್ತು ಲಾಂಗ್ ಜಂಪ್, ಹೈ ಜಂಪ್, ಟ್ರಿಪ್ಲ್ ಜಂಪ್, ಶಾಟ್‌ಪುಟ್, ಡಿಸ್ಕಸ್ ಎಸೆತ, ಹಾಮ್ಮರ್ ಎಸೆತ, ಜವೆಲಿನ್ ಎಸೆತ ಇತ್ಯಾದಿ ವಿಭಾಗಗಳಲ್ಲಿ ನಡೆಯಲಿದೆ.

ಬಾಲಕ ಹಾಗೂ ಬಾಲಕಿಯರಿಗೆ 10 ವರ್ಷದ ಕೆಳಗಿನವರಿಗೆ 50 ಮೀ. ಓಟ ಮತ್ತು ಲಾಂಗ್ ಜಂಪ್, 12 ವರ್ಷದ ಕೆಳಗಿನವರಿಗೆ 100 ಮೀ. ಓಟ ಮತ್ತು ಲಾಂಗ್ ಜಂಪ್, 14 ವರ್ಷದ ಕೆಳಗಿನವರಿಗೆ 100, 400 ಮೀ. ಓಟ ಮತ್ತು ಲಾಂಗ್ ಜಂಪ್, ಶಾಟ್‌ಪುಟ್ ವಿಶೇಷ ಮಕ್ಕಳಿಗಾಗಿ 50 ಮೀ. ಹಾಗೂ 100 ಮೀ. ಓಟದ ಸ್ಪರ್ಧೆ ನಡೆಯಲಿದೆ.

ಸೆ.10ರೊಳಗೆ ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ರಾಜ್ ಗೋಪಾಲ್ ಸುವರ್ಣ (9448104159), ಲಕ್ಷ್ಮಣ್ ರೈ (9449203102), ಕೆ. ಮಹಾಬಲ ಶೆಟ್ಟಿ (9964555112) ಸಂಪರ್ಕಿಸುವಂತೆ ಅಸೋಸಿಯೇಶನ್ ಕಾರ್ಯದರ್ಶಿ ಲಕ್ಷ್ಮಣ್ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News