ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
Update: 2017-09-03 19:58 IST
ಬೆಳ್ತಂಗಡಿ, ಸೆ. 3: ಚಾರ್ಮಾಡಿ ಗ್ರಾಮದ ನಿವಾಸಿ 17 ವರ್ಷ ಪ್ರಾಯದ ಸುಮಲತಾ ಅ. 20 ರಿಂದ ನಾಪತ್ತೆಯಾಗಿದ್ದಾರೆ.
ಉಜಿರೆಗೆಂದು ಹೋದವಳು ಮನೆಗೆ ಬಂದಿಲ್ಲ. ಎಲ್ಲಾ ಕಡೆ ಹುಡುಕಾಡಿ ಬಳಿಕ ಪೋಷಕರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಗುತ್ಯಡ್ಕದ ನಿವಾಸಿ ನಂದಿನಿ(20) ಎಂಬಾಕೆ ನಾಪತ್ತೆಯಾಗಿದ್ದಾರೆ. ಈಕೆಗೆ 3 ದಿನಗಳ ಹಿಂದೆ ನಿಶ್ವಿತಾರ್ಥ ನಡೆದಿದ್ದು ಮನೆಯಿಂದ ನಾಪತ್ತೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಡಿ ಬಳಿಕ ಪೋಷಕರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.