ಹೊಳೆಗೆ ಬಿದ್ದು ಕೃಷಿಕ ಮೃತ್ಯು
Update: 2017-09-03 21:38 IST
ಹೆಬ್ರಿ, ಸೆ. 3: ಕೈಕಾಲು ತೊಳೆಯಲು ಹೋದ ಕೃಷಿಕರೊಬ್ಬರು ಬೇಳಂಜೆಯ ಹೊನ್ಕಲ್ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಬೇಳಂಜೆಯ ಕರುಣಾಕರ ಪೂಜಾರಿ ಎಂದು ಗುರುತಿಸಲಾಗಿದೆ.
ಇವರು ತನ್ನ ಪತ್ನಿ ಜೊತೆ ಕೃಷಿ ಕೆಲಸ ಮಾಡಿ, ಬಳಿಕ ಹೊಳೆಯಲ್ಲಿ ಕೈಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟರು. ಅಲ್ಲೇ ಇದ್ದ ಕೆಲವರು ಕೂಡಲೇ ನೀರಿಗೆ ಹಾರಿ ಕರುಣಾಕರ ಪೂಜಾರಿ ಯನ್ನು ಮೇಲಕ್ಕೆ ಎತ್ತಿದ್ದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.