ನದಿಗೆ ಬಿದ್ದು ಯುವಕ ಮೃತ್ಯು
Update: 2017-09-03 21:49 IST
ಮಲ್ಪೆ, ಸೆ.3: ಮಲ್ಪೆ ಬಂದರಿನಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಒರಿಸ್ಸಾ ರಾಜ್ಯದ ಸುಂದರ್‌ಗಡ್ ಜಿಲ್ಲೆಯ ಜದುಮನಿ ಬೋಯರ್(32) ಎಂದು ಗುರುತಿಸಲಾಗಿದೆ.
ಬಂದರಿನ ಯುಎಫ್‌ಟಿ ಧಕ್ಕೆಯ ಹೊಳೆಯಲ್ಲಿ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಇವರು ಸೆ. 2ರಂದು ಬೆಳಗಿನ ಜಾವ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿ ರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.