ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2017-09-03 21:51 IST
ಬೈಂದೂರು, ಸೆ.3: ತೆಂಗಿನ ಮರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.2ರಂದು ರಾತ್ರಿ ವೇಳೆ ಯಡ್ತರೆ ಗ್ರಾಮದ ಬ್ಯಾಂಡ್‌ಹಿತ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಬ್ಯಾಂಡ್‌ಹಿತ್ಲು ವಾಲ್ಮತ್(41) ಎಂದು ಗುರುತಿಸಲಾಗಿದೆ. ನೆರೆಮನೆಯ ತೆಂಗಿನ ಮರ ದಿಂದ ತೆಂಗಿನ ಕಾಯಿ ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.