ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ
Update: 2017-09-04 21:20 IST
ಕಡಬ, ಸೆ. 4: ಠಾಣಾ ವ್ಯಾಪ್ತಿಯ ಅಲಂಕಾರು ಎಂಬಲ್ಲಿ ಶಾಲೆಗೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವುದಾಗಿ ವಿದ್ಯಾರ್ಥಿಯ ತಂದೆ ಸೋಮವಾರ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಆಲಂಕಾರು ಗ್ರಾಮದ ಉಜುರ್ಲಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ, ಹತ್ತನೆ ತರಗತಿಯ ವಿದ್ಯಾರ್ಥಿ ಶಿವಕುಮಾರ್ ಉಪಾಧ್ಯಾಯ (15) ಕಾಣೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಈತ ಶನಿವಾರದಂದು ಶಾಲೆಗೆಂದು ತೆರಳಿದ್ದು, ನಂತರ ನಾಪತ್ತೆಯಾಗಿದ್ದಾನೆನ್ನಲಾಗಿದೆ. ಮನೆಯಲ್ಲಿದ್ದು ಓದಲು ಮನಸ್ಸು ಬರುವುದಿಲ್ಲ. ನನ್ನ ಬಗ್ಗೆ ಚಿಂತೆ ಮಾಡುವುದು ಬೇಡ. ಬೇಗನೆ ಹಿಂತಿರುಗಿ ಬರುತ್ತೇನೆ ಎಂದು ಚೀಟಿ ಬರೆದು ಕಾಣೆಯಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಕಡಬ ಪೊಲೀಸ್ ಠಾಣೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಮನ್ನು ಸಂಪರ್ಕಿಸಬಹುದಾಗಿದೆ.