ಯುರೋಪಿಯನ್ ವಿದ್ಯಾರ್ಥಿಗಳಿಗೆ ಯಕ್ಷಗಾನ ಉಪನ್ಯಾಸ
Update: 2017-09-04 21:29 IST
ಉಡುಪಿ, ಸೆ.4: ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಯಕ್ಷಗಾನ ಉಪನ್ಯಾಸ ಹಾಗೂ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಪ್ರಾತ್ಯಕ್ಷಿಕೆಯನ್ನು ಗುರುಬನ್ನಂಜೆ ಸಂಜೀವ ಸುವರ್ಣ ನಡೆಸಿಕೊಟ್ಟರು. ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಹಾಗೂ ಯಕ್ಷಗಾನ ಸಂಶೋಧನ ವಿದ್ಯಾರ್ಥಿಯಾದ ವೈಭವ್ ಲೋಕೂರ್ ಯಕ್ಷಗಾನ ಉಪನ್ಯಾಸ ನೀಡಿದರು. ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ಪಂಚವಟಿ ಯಕ್ಷಗಾನ ನೃತ್ಯ ರೂಪಕ ನಡೆಯಿತು.