ಕಾನೂನು ಅರಿವು- ಜಾಗೃತಿ ಕಾರ್ಯಕ್ರಮ
Update: 2017-09-04 21:30 IST
ಉಡುಪಿ, ಸೆ.4: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಟಕದ ವತಿಯಿಂದ ಕಾನೂನು ಅರಿವು ಜಾಗೃತಿ ಕಾರ್ಯಕ್ರಮವು ಕಾಲೇಜಿನ ರಜತ ಮಹೋತ್ಸವ ಸಬಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕಿ ಮುಕ್ತ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ವಾಸಪ್ಪನಾಯ್ಕೆ ಕಾನೂನು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ರವಿನಂದನ್ ಹಾಗೂ ಅನುಪಮಾ ಉಪಸ್ಥಿತರಿದ್ದರು. ರೋಶನಿ ಸ್ವಾಗತಿಸಿದರು. ಶಯೋನಾ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.