ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ
Update: 2017-09-04 21:45 IST
ಮಣಿಪಾಲ, ಸೆ.4: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನಲ್ಲಿ ಗೃಹಿಣಿಯರಿಗೆ/ಯುವತಿಯರಿಗೆ ಸೆ.15ರಿಂದ 18ರವರೆಗೆ ಗೃಹ ಉತ್ಪನ್ನಗಳ ಬಗ್ಗೆ (ಸಾರು, ಸಾಂಬಾರು, ಕಷಾಯ ಹುಡಿ, ಹಪ್ಪಳ, ಸೆಂಡಿಗೆ, ಜ್ಯಾಮ್, ಫಿನಾಯಿಲ್ ತಯಾರಿಕೆ) ಹಾಗೂ ಗೃಹ ನಿರ್ವಹಣೆಯ ಕುರಿತು ಮೂರು ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಉಚಿತವಾಗಿದ್ದು, ದೂರದಿಂದ ಬರುವವರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ತಮ್ಮ ಭಾಗವಹಿಸುವಿಕೆಯನ್ನು ಭಾರತೀಯ ವಿಕಾಸ ಟ್ರಸ್ಟ್, ಶಿವಳ್ಳಿ, ಮಣಿಪಾಲ-ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ- 2 ಇಲ್ಲಿ (ದೂರವಾಣಿ:0820-2570263) ಸೆ.11ರೊಳಗೆ ದೃಢೀಕರಿಸ ಬಹುದು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸೆ.15ರಂದು ಬೆಳಗ್ಗೆ 9:30ಕ್ಕೆ ಬಿವಿಟಿಯಲ್ಲಿ ಹಾಜರಿರಬೇಕು ಎಂದು ಭಾರತೀಯ ವಿಕಾಸ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.