ಬೈಕ್ ರ‍್ಯಾಲಿ ನಡೆದೇ ನಡೆಯುತ್ತೆ: ಕೋಟ ಶ್ರೀನಿವಾಸ ಪೂಜಾರಿ
Update: 2017-09-04 21:53 IST
ಉಡುಪಿ, ಸೆ.4: ಬಹುಸಂಖ್ಯಾತ ಸಮುದಾಯವನ್ನು ಮಟ್ಟಹಾಕುವ ರಾಜ್ಯ ಸರಕಾರದ ನೀತಿಗೆ ವಿರುದ್ಧವಾಗಿ ಸೆ. 7ರಂದು ಬೈಕ್ ರ‍್ಯಾಲಿ ಯಶಸ್ವಿಯಾಗಿ ನಡೆಯುವುದು ಖಂಡಿತ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೆಳಿದ್ದಾರೆ.
ಬೈಕ್ ರ‍್ಯಾಲಿ ಉದ್ದೇಶ, ಹದಗೆಟ್ಟಿರುವ ಕಾನೂನು ವ್ಯವಸ್ಥೆಯ ಬಗ್ಗೆ ಸರಕಾರದ ಕಣ್ಣು ತೆರೆಸುವುದು ಮಾತ್ರವಲ್ಲ, ಅಪರಾಧಗಳಲ್ಲಿ ಭಾಗಿಯಾದ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುವುದು ಕೂಡಾ ಆಗಿದೆ ಎಂದವರು ಹೇಳಿದ್ದಾರೆ.
ನೂತನ ಗೃಹ ಮಂತ್ರಿ ರಾಮಲಿಂಗ ರೆಡ್ಡಿ ರಾಜ್ಯದಲ್ಲಿರುವ ಎಲ್ಲಾ ಪ್ರಜೆಗಳು ಸಮಾನರೆಂದು, ಎಲ್ಲರಿಗೂ ನ್ಯಾಯ ಕೇಳುವ ಸಂವಿಧಾನ ಬದ್ಧ ಹಕ್ಕಿದೆ ಎಂದು ಅರಿಯದೇ ಬಿಜೆಪಿಯ ಬೈಕ್ ರ‍್ಯಾಲಿ ತಡೆದರೆ, ನ್ಯಾಯ ಕೇಳುವ ದನಿಯನ್ನೇ ಉದುಗಿಸಿದ ಅವಮಾನಕ್ಕೆ ತುತ್ತಾಗುತ್ತಾರೆ ಎಂದು ತಿಳಿಸಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯಿಂದ ಬೈಕ್ ರ‍್ಯಾಲಿ ನಡೆದೇ ನಡೆಯುತ್ತೆ. ತಡೆದರೆ ಅದು ಕಾಂಗ್ರೆಸ್ ಸರಕಾರಕ್ಕೇ ಮಾರಕವಾಗಲಿದೆ ಎಂದರು.