×
Ad

ಇಸ್ಪೀಟು ಜುಗಾರಿ: 12 ಮಂದಿ ಸೆರೆ

Update: 2017-09-04 21:59 IST

ಕಾರ್ಕಳ, ಸೆ.4: ನಂದಳಿಕೆ ಗ್ರಾಮದ ಜಂತ್ರಗುಡ್ಡೆ ಸರಕಾರಿ ಹಾಡಿಯಲ್ಲಿ  ಇಸ್ಪೀಟು ಜುಗಾರಿ ಆಡುತ್ತಿದ್ದ ಇನ್ನಾದ ಪ್ರವೀಣ್ (28), ಜಂತ್ರದ ರಾಜೇಶ್(27), ಪಿಲಾರ್‌ಖಾನ್‌ನ ನಿತಿನ್ ಶೆಟ್ಟಿ(27), ತೆಳ್ಳಾರಿನ ರಾಕೇಶ್(25), ನಿಂಜೂರಿನ ಸಚಿನ್(23), ಕಾಂಜಾರಕಟ್ಟೆಯ ಸುಕೇಶ್(30) ಎಂಬವರನ್ನು ಪೊಲೀಸರು ಬಂಧಿಸಿ 62,00ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ:  ಮಲ್ಪೆ ಸಮೀಪ ಇಸ್ಪೀಟು ಜುಗಾರಿ ಆಡುತ್ತಿದ್ದ ಚೇತನ್, ತಾರನಾಥ, ರಾಕೇಶ್, ಕಿರಣ್, ರಾಮ, ವಿಜಯ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 2,650ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News