ಕೋಳಿ ಅಂಗಡಿಗೆ ನುಗ್ಗಿ ದರೋಡೆ
Update: 2017-09-04 22:01 IST
ಕೋಟ, ಸೆ.4: ಸಾಲಿಗ್ರಾಮದ ಮೀನು ಮಾರ್ಕೆಟ್ ಎದುರಿನ ಕೋಳಿ ಅಂಗಡಿಗೆ ರವಿವಾರ ರಾತ್ರಿ 9:30ರ ಸುಮಾರಿಗೆ ನುಗ್ಗಿದ ದುಷ್ಕರ್ಮಿಗಳು ಮಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ಕಟ್ಟಿಹಾಕಿ ಸಾವಿರಾರು ರೂ. ಹಣ ದರೋಡೆ ಮಾಡಿರುವ ಬಗ್ಗೆ ವರದಿಯಾಗಿದೆ.
ಸಾಲಿಗ್ರಾಮದ ಗ್ರೇಶಿಯನ್ ಲೋಬೊ ಎಂಬವರ ಲೋಬೊ ಕೋಳಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಗ್ರೇಶಿಯನ್ ಲೋಬೊರನ್ನು ಹೊಡೆದು ಕಣ್ಣಿಗೆ ಕರದ ಪುಡಿ ಹಾಕಿ ಹಗ್ಗದಿಂದ ಕಟ್ಟಿ ಹಾಕಿ, ಕ್ಯಾಶ್ ಡ್ರಾವರ್ ನಲ್ಲಿದ್ದ 40,000ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗಾಯಗೊಂಡಿರುವ ಗ್ರೇಶಿಯನ್ ಲೋಬೊ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.