ಮೀನುಗಾರನ ಮೃತದೇಹ ಪತ್ತೆ
Update: 2017-09-04 22:05 IST
ಮಲ್ಪೆ, ಸೆ.4: ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತ ದೇಹವು ಮಲ್ಪೆಪಡುಕೆರೆಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ರಘು (53) ಎಂದು ಗುರುತಿಸಲಾಗಿದೆ. ಇವರು ಆ.31ರಂದು ಮಲ್ಪೆನಾರಾಯಣ ಎಂಬವರ ಕೃಷ್ಣದೀಪ ಬೋಟಿನಲ್ಲಿ ಇತರ ಮೀನುಗಾರ ರೊಂದಿಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಅಲ್ಲಿ ರಾತ್ರಿ ವೇಳೆ ರಘು ಮೀನಿನ ಬಲೆ ಹಾಗೂ ರೋಪ್ ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.