ಹುಸೈನ್ ಕಾಟಿಪಳ್ಳರ ‘ಅಧ್ಯಕ್ಷರ ರಾಜೀನಾಮೆ’ ಕೃತಿ ಬಿಡುಗಡೆ
ಮಂಗಳೂರು, ಸೆ.4 ನಿಲಾವು ಕಲಾ ವೇದಿಕೆ ಹೊರತಂದ ಹುಸೈನ್ ಕಾಟಿಪಳ್ಳ ರಚಿಸಿದ ‘ಅಧ್ಯಕ್ಷರ ರಾಜೀನಾಮೆ’ ಕಥಾ ಸಂಕಲನ ಮತ್ತು ‘ಈದ್ ಮುಬಾರಕ್’ ಬ್ಯಾರಿ ಹಾಡುಗಳ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಸೋಮವಾರ ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಿತು.
ಅಲ್‌ಮುಝೈನ್ ಜುಬೈಲ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ ಕಥಾ ಸಂಕಲನ ಬಿಡುಗಡೆಗೊಳಿಸಿದರು. ಕೃತಿಯ ಪ್ರಥಮ ಪ್ರತಿಯನ್ನು ಸ್ಟೀಲ್ ಟ್ರೇಡರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಸ್ವೀಕರಿಸಿದರು.
ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಡಿವಿಡಿ ಬಿಡುಗಡೆಗೊಳಿಸಿದರು. ಇದರ ಪ್ರಥಮ ಪ್ರತಿಯನ್ನು ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಸ್ವೀಕರಿಸಿದರು.
ಶಾಸಕ ಬಿ.ಎ.ಮೊಯ್ದಿನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ವಿಜಯ ಕುಮಾರ್ ಶೆಟ್ಟಿ ಸಮಾಜದಲ್ಲಿ ಸಾಹಿತಿ, ಲೇಖಕರು, ಕಲಾವಿದರನ್ನು ಗುರುತಿಸಲಾಗುತ್ತಿಲ್ಲ. ಅವರ ಪ್ರತಿಭೆಗೆ ತಕ್ಕ ಮಾನ್ಯತೆ, ಗೌರವ ಸಿಗುತ್ತಿಲ್ಲ. ಜಾತಿ, ಪಕ್ಷಗಳ ಬೇಧ ಮರೆತು ಅರ್ಹರನ್ನು ಗುರುತಿಸಬೇಕಿದೆ ಎಂದರು.
ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ಪುಸ್ತಕ ಪರಿಚಯ ಮಾಡಿದರು. ವೇದಿಕೆಯಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಬ್ಯಾರಿ ಕಲಾರಂಗದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ, ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು, ಉದ್ಯಮಿ ಸುರೇಶ್ ಶೆಟ್ಟಿ, ನಿಲಾವು ಕಲಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಫೈಝ್, ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್ ಉಪಸ್ಥಿತರಿದ್ದರು.
ಅನಸ್ ಮೊಯ್ದಿನ್ ಕಿರಾಅತ್ ಪಠಿಸಿದರು. ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.