×
Ad

ಸೆ.6: ಡಿಕೆಎಸ್‌ಸಿ ಪಬ್ಲಿಕ್ ಸೆಮಿನಾರ್

Update: 2017-09-04 23:04 IST

ಮಂಗಳೂರು, ಸೆ.4: ದ.ಕ.ಸುನ್ನಿ ಸೆಂಟರ್ (ಡಿಕೆಎಸ್‌ಸಿ) ವತಿಯಿಂದ ಸೆ.6ರಂದು ಬೆಳಗ್ಗೆ 10ಕ್ಕೆ ನಗರದ ಬಲ್ಮಠ ವಿಮೆನ್ಸ್ ರಿಸೋರ್ಸ್‌ ಸೆಂಟರ್‌ನಲ್ಲಿ ಪಬ್ಲಿಕ್ ಸೆಮಿನಾರ್ ನಡೆಯಲಿದೆ.

ಡಿಕೆಎಸ್‌ಸಿ ಅಧ್ಯಕ್ಷ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊಯ್ದಿನ್ ಬಾವಾ,  ಯೆನೆಪೊಯ ಅಬ್ದುಲ್ಲ ಕುಂಞಿ, ಬಿ.ಎಂ. ಫಾರೂಕ್, ಝಕರಿಯಾ ಜೋಕಟ್ಟೆ, ಮುಮ್ತಾಝ್ ಅಲಿ, ಅಬ್ದುರ್ರವೂಫ್ ಪುತ್ತಿಗೆ, ನೌಶಾದ್ ಹಾಜಿ ಸೂರಲ್ಪಾಡಿ, ಹಾಜಿ ಅಬ್ದುಲ್ಲಾ ನಾವುಂದ, ಅಬ್ದುಲ್ ಹಮೀದ್ ಸುಳ್ಯ, ಮೋನಬ್ಬ ಅಬ್ದುಲ್ ರಹ್ಮಾನ್, ನಝೀರ್ ಕತರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News