ಮೆಸ್ಕಾಂ ವಿರುದ್ಧ ಸಿಐಟಿಯು ಧರಣಿ
Update: 2017-09-04 23:08 IST
ಮಂಗಳೂರು, ಸೆ.4: ಸಿಐಟಿಯು ಸಂಯೋಜಿತ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್, ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟದ ವತಿಯಿಂದ ಸೋಮವಾರ ನಗರದ ಬಿಜೈಯಲ್ಲಿರುವ ಮೆಸ್ಕಾಂ ಕಚೇರಿಯ ಮುಂದೆ ಗುತ್ತಿಗೆ ಕಾರ್ಮಿಕರು ಧರಣಿ ನಡೆಸಿದರು.
ವಿದ್ಯುತ್ ಗುತ್ತಿಗೆ ಕಾರ್ಮಿಕರಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಇಂಧನ ಇಲಾಖೆಯ ಎಲ್ಲ ವಿಭಾಗಗಳ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಮಾಸಿಕ 21 ಸಾವಿರ ರೂ.ನೀಡಬೇಕು, ಇಎಸ್‌ಐ, ಪಿಎಫ್ ನೀಡಬೇಕು, ವಿದ್ಯುತ್ ಅವಘಡದಲ್ಲಿ ಮೃತಪಟ್ಟವರಿಗೆ, ಅಂಗವಿಕಲರಾದವರಿಗೆ ಪರಿಹಾರ ನೀಡಬೇಕು, ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಈ ಸಂದರ್ಭ ಸಿಐಟಿಯು ಮುಖಂಡರಾದ ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಶಿವಕುಮಾರ್ ಎಸ್.ಎಂ., ಪ್ರಕಾಶ್ ಬೆಳ್ತಂಗಡಿ, ಮೆಸ್ಕಾಂನ ನಿವೃತ್ತ ಇಂಜಿನಿಯರ್ ಜೇರಿ ಪತ್ರಾವೋ ಉಪಸ್ಥಿತರಿದ್ದರು.