×
Ad

‘ಹಾರ್ವೆ’ ಚಂಡಮಾರುತ: 2ನೆ ಭಾರತೀಯ ವಿದ್ಯಾರ್ಥಿನಿಯೂ ಸಾವು

Update: 2017-09-04 23:32 IST

ಹ್ಯೂಸ್ಟನ್ (ಅಮೆರಿಕ), ಸೆ. 4: ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ ‘ಹಾರ್ವೆ’ ಚಂಡಮಾರುತ ಉಂಟು ಮಾಡಿದ ಪ್ರವಾಹಕ್ಕೆ ಸಿಲುಕಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.

25 ವರ್ಷದ ಶಾಲಿನಿ ಸಿಂಗ್ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಪ್ರವಾಹ ಪೀಡಿತ ಕೆರೆಯೊಂದರಿಂದ ಶಾಲಿನಿ ಮತ್ತು ಇನ್ನೋರ್ವ ಭಾರತೀಯ ವಿದ್ಯಾರ್ಥಿ ನಿಖಿಲ್ ಭಾಟಿಯರನ್ನು ರಕ್ಷಿಸಲಾಗಿತ್ತು. ಅವರಿಬ್ಬರು ಆ ಕೆರೆಗೆ ಈಜಲು ಹೋಗಿದ್ದರು.

ಭಾಟಿಯ ಆಗಸ್ಟ್ 30ರಂದು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಶಾಲಿನಿ ರವಿವಾರ ರಾತ್ರಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.

  ಹೊಸದಿಲ್ಲಿಯಿಂದ ಹೋಗಿದ್ದ ಅವರ ತಮ್ಮ ಮತ್ತು ಮಾವ ಮರಣದ ಸಮಯದಲ್ಲಿ ಅವರ ಜೊತೆಗಿದ್ದರು.

ದಿಲ್ಲಿ ನಿವಾಸಿಯಾಗಿದ್ದ ಶಾಲಿನಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿಗಾಗಿ ಕಳೆದ ತಿಂಗಳಷ್ಟೇ ಅಮೆರಿಕಕ್ಕೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News